ತಿರುವನಂತಪುರಂ: ಆಯುರ್ವೇದ ಕಶಾಯದಲ್ಲಿ ವಿಷ ಹಾಕಿ ಪ್ರಿಯಕರನಿಗೆ ಕುಡಿಸಿ ಹತ್ಯೆ ಮಾಡಿದ್ದ ಕೇರಳದ ಗ್ರೀಷ್ಮಾ ಎಂಬಾಕೆಗೆ ಸ್ಥಳೀಯ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೇರಳದ 23 ವರ್ಷದ ಶರೋನ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪ್ರೇಯಸಿ 24 ವರ್ಷದ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ತನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬ ಗ್ರೀಷ್ಮಾ ಹೇಳಿಕೆಯನ್ನು ಕೋರ್ಟ್ ತಿರಸ್ಕರಿಸಿತು. ಕೊಲೆಯ ಪ್ರಕರಣದಲ್ಲಿ ಅಪರಾಧಿಯ ವಯಸ್ಸು ಮತ್ತು ಇತರ ಸಂದರ್ಭಗಳನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
2022ರ ಅ. 25ರಂದು ಶರೋನ್ ರಾಜ್ ವಿಷಪೂರಿತ ಜ್ಯೂಸ್ ಸೇವಿಸಿದ ಬಳಿಕ ಆತನ ಆರೋಗ್ಯ ಹದಗೆಟ್ಟಿತ್ತು. ಇದಾದ 11 ದಿನಗಳ ನಂತರ, ಅವರು ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು.
ಗ್ರೀಷ್ಮಾಗೆ ನಾಗರಕೋಯಿಲ್ ನ ಸೇನಾ ಸಿಬ್ಬಂದಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಹೀಗಾಗಿ ಆಕೆ ತನ್ನ ಪ್ರೇಮಿಯಾಗಿದ್ದ ಶರೋನ್ ಜೊತೆ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆತನನ್ನು ತನ್ನ ಜೀವನದಿಂದ ದೂರವಿಡಲು ಪ್ರಯತ್ನಿಸಿದ್ದಳು. ಇದಕ್ಕೆ ಶರೋನ್ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಗ್ರೀಷ್ಮಾ ಶರೋನ್ ಕೊಲೆಗೆ ಸಂಚು ರೂಪಿಸಿದ್ದು, ಆತನನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಶರೋನ್ಗೆ ಆಯುರ್ವೇದಿಕ್ ಕೀಟನಾಶಕ ಬೆರೆಸಿದ ಜ್ಯೂಸ್ ನೀಡಿದ್ದಳು. ಇದರಿಂದಾಗಿ ಶರೋನ್ ಅನಾರೋಗ್ಯಕ್ಕೀಡಾಗಿ ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx