ಹಿರಿಯೂರು: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರನ್ನು ಸರ್ಕಾರಿ ಅಧಿಕಾರಿಗಳ ವರ್ಗವು ಶಾಸಕರಂತೆ ಬಿಂಬಿಸುವಂತೆ ಒತ್ತಡ ಹೇರುತ್ತಿರುವುದು ವಿಪರ್ಯಾಸ ಎಂದು ಮಹಿಳಾ ಸಾಂತ್ವನ ಕೇಂದ್ರ ಧರಣಿ ಸಂಸ್ಥೆಯ ಕಾರ್ಯದರ್ಶಿ ರಮಾ ನಾಗರಾಜು ಗುಡುಗಿದರು.
ಹಿರಿಯೂರು ತಾಲ್ಲೂಕಿನ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ರವರ ಪತಿ ಡಿ.ಟಿ.ಶ್ರೀನಿವಾಸ್ ಜಿಲ್ಲಾಡಳಿತವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಎನ್.ರಮಾನಾಗರಾಜು, ಭಾರತದ ಸಂವಿಧಾನದಲ್ಲಿ ನ್ಯಾಯಾಂಗ , ಕಾರ್ಯಾಂಗ , ಶಾಸಕಾಂಗವಿದ್ದು ಪ್ರತಿಯೊಬ್ಬ ಭಾರತದ ಪ್ರಜೆಯು ಸಹ ಗೌರವಿಸುವುದು ಆದ್ಯ ಕರ್ತವ್ಯವಾಗಿದೆ . ಆದರೆ ಇತ್ತೀಚಿನ ದಿನಗಳಲ್ಲಿ ಹಿರಿಯೂರು ತಾಲ್ಲೂಕಿನ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ್ ರವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಂಬಂಧಪಟ್ಟ ಅಧಿಕಾರಿ ವರ್ಗದವರನ್ನು ಗಣನೆಗೆ ತೆಗೆದುಕೊಳ್ಳದೇ, ಅವರು ಹೇಳಿದಂತೆ ಅಧಿಕಾರಿ ವರ್ಗದವರು ಸರ್ಕಾರಿ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಬೇಕಾಗುವಂತಾಗಿರುವುದು ಖಂಡನಾರ್ಹವಾಗಿದೆ ಎಂದರು.
ತಮ್ಮ ಪತಿಯನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಶಾಸಕಿ ಪೂರ್ಣಿಮಾ ಪ್ರೋತ್ಸಾಹಿಸುತ್ತಿರುವುದು ಶ್ರೀ ಬೇಜಾವ್ದಾರಿಯಾಗಿದ್ದು , ಪುರುಷ ಪ್ರಧಾನಕ್ಕೆ ಒತ್ತುಕೊಟ್ಟಂತೆ ಇವರ ನಡುಯವಳಿಕೆ ಎದ್ದು ತೋರಿಸುತ್ತದೆ ಎಂದು ಟೀಕಿಸಿದರು.
ಹಿರಿಯೂರು ತಾಲ್ಲೂಕಿನ ಹೊರವಲಯದಲ್ಲಿರುವ ಜವನಗೊಂಡನಹಳ್ಳಿ ಹೋಬಳಿ ಆದಿವಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಂಕುಸ್ಥಾಪನೆಗೊಂಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸರ್ಕಾರಿ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಶಾಸಕಿಯ ಬದಲು ಅವರ ಪತಿ ಎಲ್ಲಾ ರೂಪರೇಷೆ ಹಾಗೂ ಪ್ರಾಸ್ತಾವಿಕ ನುಡಿಯಿಂದ ಹಿಡಿದು ನಿಜಕ್ಕೂ ಸಹ ಖಂಡನಾರ್ಹ ಎಂದು ಅವರು ಹೇಳಿದರು.
ಮತ್ತೊಂದು ಭಾರಿ ಈ ರೀತಿಯಾಗದಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಎಚ್ಚರವಹಿಸ ಬೇಕು. ಶಾಸಕಾಂಗದ ಮಾನದಂಡದ ಪ್ರಕಾರ ಹಿರಿಯೂರು ಜನತೆಗೆ ಸೇವೆ ಸಲ್ಲಿಸುವಂತೆ ನಿರ್ದೇಶಿಸಬೇಕೆಂದು ಅವರು ಒತ್ತಾಯಿಸಿದರು.
ವರದಿ: ಆರ್. ಮುರುಳಿಧರನ್ , ಹಿರಿಯೂರು ( ಚಿತ್ರದುರ್ಗ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy