ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆ ಕೈಬಿಡಲು ಕಾಂಗ್ರೆಸ್ ಸಚಿವ ಸಂಪುಟ ಅಸ್ತು ಎಂದಿದ್ದು ಹೆಡ್ಗೆವಾರ್, ವೀರ ಸಾವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ ಪಾಠಗಳನ್ನು ಕೈಬಿಡಲಿದೆ.
ಸಂಪುಟ ಸಭೆಯ ಬಳಿಕ ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ 6 ರಿಂದ 10ನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದು,
6ನೇ ತರಗತಿಯಿಂದ 10ನೇ ತರಗತಿ ವರೆಗೆ ಕೆಲವು ಪಾಠಗಳನ್ನ ಈ ಸಾಲಿನಿಂದಲೇ ಪರಿಷ್ಕರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಠ್ಯ ಪುಸ್ತಕ ಈಗಾಗಲೇ ಹಂಚಿಕೆ ಆಗಿದೆ. ಆದ್ದರಿಂದ ಹೆಚ್ಚುವರಿ ಪುಸ್ತಕಗಳನ್ನ ಶಾಲೆಗಳಿಗೆ ತಲುಪಿಸುತ್ತೇವೆ. ಅದರಲ್ಲಿ ಕೆಲವು ಶಿಷ್ಟಾಚಾರ ಇರುತ್ತವೆ. ಜ್ಯೋತಿ ಬಾಫುಲೆ, ಅಂಬೇಡ್ಕರ್ ಹಾಗೂ ನೆಹರೂ ಪಾಠಗಳು ಸೇರ್ಪಡೆ ಆಗಿರುತ್ತೆ.
ಹೆಡ್ಗೆವಾರ್, ಚಕ್ರವರ್ತಿ ಸೂಲಿಬೆಲೆ ಪಠ್ಯಗಳನ್ನ ಕೈಬಿಟ್ಟಿದ್ದೇವೆ. ಇದು ತಾತ್ಕಾಲಿಕ ಬದಲಾವಣೆ. ಮುಂದೆ ಸಮಿತಿ ಮಾಡಿ ಸಂಪೂರ್ಣ ಪರಿಷ್ಕರಣೆ ಮಾಡಲಾಗುತ್ತದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


