ಶಿರಾ: ಭಾರತೀಯ ಜನತಾ ಪಾರ್ಟಿ, ಶಿರಾ ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಇಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನವನ್ನು ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ. ಗೌಡ ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಅವರ ಗೃಹ ಕಛೇರಿ ಸೇವಾಸದನದಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರುಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಧುಗಿರಿ ಸಂಘಟನಾ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬಿ.ಸಿ.ಹನುಮಂತೇಗೌಡ ಅವರ ಹುಟ್ಟು ಹಬ್ಬವನ್ನು ಹಾಗೂ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷರಾದ ಲಲಿತಮ್ಮನವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ನಿಕಟ ಪೂರ್ವ ಅಧ್ಯಕ್ಷರಾದ ಚಿಕ್ಕಣ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಉಮಾ ವಿಜಯರಾಜ್, ಓಬಿಸಿ ಮೋರ್ಚ ಜಿಲ್ಲಾಧ್ಯಕ್ಷರಾದ ಮಾಗೋಡ್ ಪ್ರತಾಪ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್ ಸಂತೆಪೇಟೆ ಹಾಗೂ ಕೊಟ್ಟ ರಂಗನಾಥ್, ಮಾಜಿನಗರ ಮಂಡಲ ಅಧ್ಯಕ್ಷರಾದ ಶ್ರೀಧರ ಮೂರ್ತಿ ಹಾಗೂ ಲಕ್ಷ್ಮೀನಾರಾಯಣ, ಮುಖಂಡರಾದ ಬಪ್ಪರಾಯಪ್ಪ, ಗೋಪಿಕುಂಟೆ ಕುಮಾರ್ ಮಾಸ್ಟ್ರು, ಗ್ರಾಮ ಪಂಚಾಯತಿ ಸದಸ್ಯರಾದ ಡಿ ಎಚ್ ಗೌಡ, ನರಸಿಂಹರಾಜು, ಉದ್ದಪ್ಪ, ಗಂಜಲಗುಂಟೆ ಮುನಿರಾಜು, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮಚಂದ್ರಪ್ಪ, ಟಿಪಿ ರಾಜಣ್ಣ, ಹಿರಿಯ ಬಿಜೆಪಿ ಕಾರ್ಯಕರ್ತರಾದ ಸಂತೆಪೇಟೆ ಶ್ರೀನಿವಾಸ್, ಮಹಿಳಾ ಕಾರ್ಯಕರ್ತರಾದ ನಾಗರತ್ನಮ್ಮ, ಪದ್ಮಾ ಮಂಜುನಾಥ್, ಸುಶೀಲಮ್ಮ, ಶೋಭಾ, ಶಕುಂತಲಮ್ಮ, ಕವಿತಾ, ತಿಮ್ಮರಾಜಮ್ಮ, ಗುಡ್ಡದ ಹಟ್ಟಿ ನರಸಿಂಹಯ್ಯ, ಜ್ಯೋತಿನಗರ ಮಹೇಶ್, ಶ್ರೀನಿವಾಸ್, ಮಲ್ಲಿಕಾಪುರ ಮಂಜುನಾಥ್, ಗಂಗಾಧರ್, ಯುವ ಮುಖಂಡರಾದ ಭಾಸ್ಕರ್, ಹರೀಶ್, ಸೈಯದ್ ಬಾಬಾ, ರಂಗಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ: ಇಸ್ಮಾಯಿಲ್ ಜಭಿವುಲ್ಲಾ ಖಾನ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4