ಶಿರಾ/ತುಮಕೂರು: ದೇಶದಲ್ಲಿ ಸುಮಾರು 15 ಕೋಟಿ ಬಿಜೆಪಿ ಕಾರ್ಯಕರ್ತರು ಇದ್ದು, ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವುದು ನಮ್ಮ ಮೂಲ ಉದ್ದೇಶ. ಪಕ್ಷಕ್ಕೆ ಕಾರ್ಯಕರ್ತರೇ ಶಾಶ್ವತ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಸಂಘಟನೆ ಅಧ್ಯಕ್ಷ ಚಿದಾನಂದ್ ಎಂ.ಗೌಡ ಹೇಳಿದರು.
ನಗರದ ಸೇವಾ ಸದನದಲ್ಲಿ ಸೋಮವಾರ ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷದ 46ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಎಂದರೆ ದೇಶಭಕ್ತಿ ಅಖಂಡ ಭಾರತ ಹಾಗೂ ವಸುದೈವ ಕುಟುಂಬಕಂ ಎನ್ನುವ ಪಕ್ಷದಲ್ಲಿ ನಾವೆಲ್ಲರೂ ಇರುವುದೇ ನಮ್ಮ ಪುಣ್ಯ ಎಂದು ಅವರು ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷಕ್ಕೆ ಕರ್ನಾಟಕ ಹೆಬ್ಬಾಗಿಲು ಆಗಿದೆ ಎಂದರು.
ನರೇಂದ್ರ ಮೋದಿಯವರು 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಕುಮಾರು ಬದಲಾವಣೆ ತಂದಿದ್ದಾರೆ. ಗೃಹ ಮಂಡಳಿ ಮಂಡಳಿ ಯೋಜನೆ ಯಡಿ ಅಡುಗೆ ಅನಿಲ ಸಂಪರ್ಕ ಕೊಟ್ಟಿದ್ದಾರೆ. ಉಜ್ವಲ್ ಯೋಜನೆ ಮುಖಾಂತರ ಉಚಿತವಾಗಿ ಗ್ಯಾಸ್ ಸಂಪರ್ಕ ಕೊಟ್ಟಿದ್ದಾರೆ. ಇದರಿಂದ ಮಹಿಳೆಯರು ಹಣಗೆ ರಹಿತವಾಗಿ ಅಡುಗೆ ಮಾಡುತ್ತಿದ್ದಾರೆ. ರೈತರಿಗೆ ಪಿಎಂ ಕಿಸಾನ್ ಯೋಜನೆ ಮೂಲಕ 6000 ರೂ.ಗಳನ್ನು ನೀಡುತ್ತಿದ್ದಾರೆ. ಎಲ್ಲರಿಗೂ 5 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಒದಗಿಸುತ್ತಿದ್ದಾರೆ. ಯುವಕರಿಗೆ ಉದ್ಯಮ ಸ್ಥಾಪಿಸಲು ಸಹಾಯಧನ ನೀಡುತ್ತಿದ್ದಾರೆ. ಭಾರತ ಈಗ ಜಪಾನ್ ಹಿಂದಕ್ಕೆ ಮುಂದೆ ಸಾಗುತ್ತಿದೆ. ಮುಂದೊಂದು ದಿನ ಅರ್ಥಿಕತೆಯಲ್ಲಿ 2-3ನೇ ಸ್ಥಾನಕ್ಕೆ ಹೋಗಲಿದ್ದೇವೆ ಎಂದರು.
ಬಿಜೆಪಿ ಅಧಿಕಾರದಲ್ಲಿ ಪುನಃ ಹಿಂದಿ ಜಾರಿ:
ಮುನಿರಾಜು ಡಾ.ಬಿ.ಗೋವಿಂದಪ್ಪ ಮಾತನಾಡಿ ಹಿಂದಿ ಭಾಷೆಯನ್ನು ನಾವು ಚಿಕ್ಕಂದಿನಿಂದಲೇ ದೇಶ ಸಂಪರ್ಕ ಭಾಷೆ ಎಂದು ಒಪ್ಪಿಕೊಂಡಿ ದೇವೆ. ಆದರೆ ಕಾಂಗ್ರೆಸ್ ಸರ್ಕಾರ ಹಿಂದಿ ಭಾಷೆಯನ್ನು ತೆಗೆದು ದ್ವಿಭಾಷಾ ನೀತಿ ಮಾಡಿರುವುದು ಖಂಡನೀಯ. ಹಿಂದಿ ಭಾಷೆ ಕಲಿತರೆ ನಾವು ದೇಶದ ಎಲ್ಲಾ ಕಡೆಗಳಲ್ಲೂ ಯಾವುದೇ ಭಾಷಾ ಸಮಸ್ಯೆ ಇಲ್ಲದಂತೆ ಸಂಚರಿಸಬಹುದು. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಪುನಃ ಹಿಂದಿ ಭಾಷೆಯನ್ನು ಜಾರಿಗೆ ತರುತ್ತೇವೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಅಧ್ಯಕ್ಷ ಈರಣ್ಣ ಪಟೇಲ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮಂಜು ರಂಗನಾಥ್, ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿನ್ನಪ್ಪ ಕುಮಾರ್ ಮಾಸ್ಟರ್, ಒಬಿಸಿ ಅಧ್ಯಕ್ಷ ಮಾಗೋಡು ಪ್ರತಾಪ್, ಮಹಿಳಾ ಘಟಕದ ಅಧ್ಯಕ್ಷೆ ಉಮಾ ವಿಜಯಕುಮಾರ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಕೆಂಚೇಗೌಡ, ತಾಲೂಕು ಘಟಕದ ರೇಷ್ಮೆ ಪದ್ಮ ಮಂಜುನಾಥ್, ನಗರ ಯುವ ಮೋರ್ಚಾ ಅಧ್ಯಕ್ಷ ಶಿವು ಸ್ನೇಹಮಯಿ, ಮುಖಂಡರಾದ ಮುದ್ದೇನಹಳ್ಳಿ ರಂಗನಾಥ್, ಬೆಂಗಳೂರು ಶಿವಕುಮಾರ್, ಬೆಂಗಳೂರು ಸಿದ್ದಪ್ಪ, ಮದ್ದಹಳ್ಳಿ ರಾಮಕೃಷ್ಣ, ಸುರೇಶ್, ಬೊಪ್ಪರಾಯಪ್ಪ, ಡಿ.ಎಸ್. ಗೌಡ, ಶಿವಲಿಂಗಯ್ಯ ಸೇರಿದಂತೆ ಹಲವರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


