ಎಚ್.ಡಿ.ಕೋಟೆ: ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಜಾದಳ ಪಕ್ಷದ ಶಿವಮ್ಮ ಚಾಕಳ್ಳಿ ಕೃಷ್ಣ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಆಸಿಫ್ ಚುನಾಯಿತರಾಗಿದ್ದಾರೆ.
ಪಟ್ಟಣದ ಪುರಸಭೆಯ ಕಚೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಚಾಕಳ್ಳಿ ವಾರ್ಡಿನ ಸದಸ್ಯರಾದ ಶಿವಮ್ಮ ಚಾಕಹಳ್ಳಿ ಕೃಷ್ಣ ಮಾತ್ರ ನಾಮಪತ್ರ ಸಲ್ಲಿಸಿದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಒಂದನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಆಸಿಫ್, ವಡ್ಡರಗುಡಿಯ ವಾರ್ಡಿನ ಕಾಂಗ್ರೆಸ್ ಸದಸ್ಯ ಸೋಮಶೇಖರ್ ಯರೆಹಳ್ಳಿ, ಹ್ಯಾಂಡ್ ಪೋಸ್ಟಿನ ವಾರ್ಡಿನ ಜಾದಳ ಪಕ್ಷದ ಸದಸ್ಯ ಹರೀಶ್ ಗೌಡ ನಾಮಪತ್ರ ಸಲ್ಲಿಸಿದ್ದರು.
ಕೊನೆ ಗಳಿಗೆಯಲ್ಲಿ ಸೋಮಶೇಖರ್ ನಾಮಪತ್ರ ವಾಪಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಆಸಿಫ್ ಮತ್ತು ಹರೀಶ್ ಗೌಡ ನಡುವೆ ಪೈಪೋಟಿ ಉಂಟಾಗಿತ್ತು. ಕಾಂಗ್ರೆಸ್ ಪಕ್ಷದ 13 ಜನ ಸದಸ್ಯರುಗಳು ಕೈ ಎತ್ತುವ ಮೂಲಕ ಮತ ಚಲಾಯಿಸುವುದಾಗಿ ಪಟ್ಟು ಹಿಡಿದರೂ ಜಾದಳ ಪಕ್ಷದ ಹತ್ತು ಜನ ಸದಸ್ಯರು ಗುಪ್ತ ಮತದಾನದ ಆಗಬೇಕೆಂದು ತಿಳಿಸಿ ಸಭೆಯಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಶ್ರೀನಿವಾಸ್ ಮತ್ತು ಮುಖ್ಯ ಅಧಿಕಾರಿ ಸುರೇಶ್ ಅವರು ಪುರಸಭೆಯ ಕಾಯ್ದೆಯ ಪುಸ್ತಕ ನೋಡಿ ನಂತರ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಪಡೆದುಕೊಂಡ ನಂತರ ಸದಸ್ಯರುಗಳು ಕೈ ಎತ್ತುವ ಮೂಲಕ ಅಭ್ಯರ್ಥಿಯ ಪರ ಮತದಾನ ಮಾಡಲು ಮಾತ್ರ ಅವಕಾಶ ಇದೆ ಎಂದು ತಿಳಿಸಿದರು.
ನಂತರ ನಡೆದ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಆಸಿಫ್ ಪರವಾಗಿ ಕಾಂಗ್ರೆಸ್ ಪಕ್ಷದ 13 ಜನ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರು, ಹರೀಶ್ ಗೌಡ ಪರವಾಗಿ ಜಾದಳದ ಪಕ್ಷದ 10 ಜನ ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದಾಗ ಚುನಾವಣಾಧಿಕಾರಿಗಳು ಆಸಿಫ್ ಅವರು ಅತಿ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದ್ದಾರೆ ಹರೀಶ್ ಗೌಡ ಅವರು ಕಡಿಮೆ ಮತ ಪಡೆದು ಸೋಲು ಅನುಭವಿಸಿದ್ದಾರೆ ಎಂದರು.
ಅಧ್ಯಕ್ಷ ಶಿವಮ್ಮ ಚಾಕಳ್ಳಿ ಕೃಷ್ಣ ಮತ್ತು ಉಪಾಧ್ಯಕ್ಷರು ಆಸಿಫ್ ಚುನಾಯಿತರಾಗುತ್ತಿದ್ದಂತೆ ಜಾದಳದ ಮತ್ತು ಕಾಂಗ್ರೆಸ್ ಜೆಡಿಎಸ್ ಕಚೇರಿ ಬಳಿ ಆ ಪಕ್ಷದ ಕಾರ್ಯಕರ್ತರ ಮುಖಂಡರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಜೈಕಾರ ಕೂಗಿದರು.
ನೂತನ ಅಧ್ಯಕ್ಷರಾದ ಶಿವಮ್ಮ ಚಾಕಳ್ಳಿ ಕೃಷ್ಣ ಉಪಾಧ್ಯಕ್ಷರಾದ ಆಸಿಫ್ ಮಾತನಾಡಿ, ಕಳೆದ ಏಳು ಎಂಟು ತಿಂಗಳಿನಿಂದ ಆಡಳಿತ ಮಂಡಳಿ ಅಧಿಕಾರವಿಲ್ಲದೆ ಅನೇಕ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ನಡೆದಿಲ್ಲ, ಶಾಸಕರು ಮತ್ತು ಸಂಸದರ ಅವರ ಸಹಕಾರದೊಂದಿಗೆ ಎಲ್ಲಾ ಸದಸ್ಯರ ನಿರ್ದೇಶನದೊಂದಿಗೆ ಪುರಸಭೆ 23 ವಾರ್ಡ್ ಗಳಲ್ಲೂ ಅಭಿವೃದ್ಧಿ ಕೆಲಸಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುವುದು.
ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಚುರುಕುಗೊಳಿಸಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡಿ ಜನಸಾಮಾನ್ಯರಿಗೆ ಕಚೇರಿಯಲ್ಲಿ ಉತ್ತಮ ಸೇವೆ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು .
ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಏಜಾಜ್ ಪಾಷಾ, ಜೆಡಿಎಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ಪುರಸಭಾ ಸದಸ್ಯರಾದ ಗೀತಾಗಿರಿ ಗೌಡ, ದರ್ಶಿನಿ ಯಶ್ವಂತ್, ಸರೋಜಮ್ಮ, ಮೆಕಾನಿಕ್ ಸೂರಿ, ನಾಗಮ್ಮ, ಸುವಾಸಿನಿ ದಿನೇಶ್, ಕವಿತಾ ಸುರೇಶ್, ಸಾಹಿರಾಬಾನು ಅನ್ಸರ್, ಅನಿತಾನಿಂಗ ನಾಯಕ, ನರಸಿಂಹಮೂರ್ತಿ, ಐಡಿಯಾ ವೆಂಕಟೇಶ್, ಮಧುಕುಮಾರ್, ರಾಜು ವಿಶ್ವಕರ್ಮ, ಲೋಕೇಶ್, ನಂಜಪ್ಪ, ನಂದಿನಿ ಸೋಮು, ಶಾಂತಮ್ಮ ಮಹೇಂದ್ರ, ಕರಾಟೆ ಪ್ರೇಮ್, ಪುಟ್ಟ ಬಸವ, ಮಿಲ್ಲು ನಾಗರಾಜು, ಮುಖಂಡರಾದ ಹೆಚ್ ಸಿ ಮಂಜುನಾಥ್, ಜಿ.ವಿ. ಮಧುಸೂದನ್, ಶಫೀ, ಫಯಾಜ್, ಸ್ಟುಡಿಯೋ ಪ್ರಕಾಶ್, ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4