nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ

    June 1, 2025

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು

    June 1, 2025
    Facebook Twitter Instagram
    ಟ್ರೆಂಡಿಂಗ್
    • ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ
    • ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ
    • ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು
    • ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ!
    • ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!
    • ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ
    • ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ
    • ಶಿಕ್ಷಕನ ಅಮಾನತು ಪ್ರಕರಣ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ
    ರಾಜ್ಯ ಸುದ್ದಿ February 22, 2022

    ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

    By adminFebruary 22, 2022No Comments2 Mins Read
    araga jnanendra

    ಶಿವಮೊಗ್ಗದಲ್ಲಿ ಹಿಂದುಪರ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ(Shivamogga Youth Murder Case) ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ನಾನೇಂದ್ರ(Araga Jnanendra) ಹೇಳಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಮಾಹಿತಿ ಪ್ರಕಾರ ಈ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

    ಭಜರಂಗ ದಳ(Bajrang Dal)ದ ಕಾರ್ಯಕರ್ತ ಹರ್ಷರನ್ನು ಬರ್ಬರವಾಗಿ ಹತ್ಯೆ(Youth Murder Case) ಮಾಡಲಾಗಿದೆ. ನಾವು ಹರ್ಷ ಅವರ ಪೋಷಕರು ಮತ್ತು ಸಹೋದರಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅವರಿಗೆ ನಾವು ಭರವಸೆ ನೀಡಿದ್ದೇವೆ. ಪ್ರಕರಣ ಸಂಬಂಧ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ನಾವು ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದಾರೆ.


    Provided by

    ಶಿವಮೊಗ್ಗದಲ್ಲಿ ನಡೆದಿರುವ ಘಟನೆ ಬಗ್ಗೆ ಸಿಎಂ(Basavaraj Bommai)ಗೆ ವಿವರಣೆ ಕೊಟ್ಟಿದ್ದೇನೆ. ಈ ಬಗ್ಗೆ ಚರ್ಚಿಸಲು ಮತ್ತೆ ಸಭೆ ಸೇರೋಣವೆಂದು ಸಿಎಂ ತಿಳಿಸಿದ್ದಾರೆ. ಹಿಜಾಬ್ ಪ್ರಕರಣಕ್ಕೂ ಇದಕ್ಕೂ ಲಿಂಕ್ ಇದ್ಯಾ ಅನ್ನೋದರ ಬಗ್ಗೆ ತನಿಖೆ ನಡೆಸುತ್ತೇವೆ. ಅರೆಸ್ಟ್ ಆಗಿರುವ ಮೂವರು ಶಿವಮೊಗ್ಗದವರು ಎಂದು ತಿಳಿದುಬಂದಿದೆ. ಇನ್ನಿಬ್ಬರು ಆರೋಪಿಗಳ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಶಾಲಾ-ಕಾಲೇಜು ಆರಂಭ ವಿಚಾರ ಸಂಬಂಧಿಸಿದಂತೆ ಪರಿಸ್ಥಿತಿ ನೋಡಿಕೊಂಡು ಡಿಸಿ ನಿರ್ಧಾರ ತಗೆದುಕೊಳ್ಳಲಿದ್ದಾರೆ ಅಂತಾ ಗೃಹ ಸಚಿವರು ತಿಳಿಸಿದ್ದಾರೆ.

    ಶವಯಾತ್ರೆ ವೇಳೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಪೊಲೀಸರು ಸಂಯಮದಿಂದ ವರ್ತಿಸಿದ್ದಾರೆ ಅಂತಾ ಹೇಳಿದ್ದಾರೆ. ಪೊಲೀಸರು ಈ ವೇಳೆ ತಾಳ್ಮೆ ವಹಿಸಿದ್ದು, ಸಂಯಮ ಮೀರಿ ವರ್ತಿಸಿ ಫೈರಿಂಗ್ ಮತ್ತು ಲಾಠಿ ಚಾರ್ಜ್ ಮಾಡಿದ್ದರೆ ಇನ್ನೂ ನಾಲ್ಕು ಹೆಣಗಳು ಬೀಳುತ್ತಿದ್ದವು ಅಂತಾ ಹೇಳುವ ಮೂಲಕ ಸಚಿವರು ಗಲಾಟೆ ಮತ್ತು ಕಲ್ಲು ತೂರಾಟದ ಘಟನೆಯನ್ನು ಸಮರ್ಥಿಸಿಕೊಂಡರು.ಸದ್ಯ ಶಿವಮೊಗ್ಗ(Shivamogga)ದ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ.

    ಬೆಂಗಳೂರಿನಿಂದ ಮತ್ತೆ 200 ಪೊಲೀಸರನ್ನು ಹೆಚ್ಚುವರಿ ಭದ್ರತೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಒಟ್ಟು 1400ಕ್ಕೂ ಹೆಚ್ಚು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಪರಿಸ್ಥಿತಿ ಬಗ್ಗೆ ಕಟ್ಟುನಿಟ್ಟಾಗಿ ನಿಗಾ ವಹಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ. ಕಾನೂನು ಸುವ್ಯವಸ್ಥೆ(Law & Order) ಹದಗೆಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುಂದಿನ ಎರಡ್ಮೂರು ದಿನ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗುವುದು ಅಂತಾ ಸಚಿವರು ತಿಳಿಸಿದ್ದಾರೆ.

    ವರದಿ: ಆಂಟೋನಿ ಬೇಗೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ

    June 1, 2025

    ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು

    June 1, 2025

    ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ!

    June 1, 2025
    Our Picks

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಅಡುಗೆ ಎಣ್ಣೆ ದರ ಇಳಿಕೆ ಸಾಧ್ಯತೆ

    May 31, 2025

    ನಾನು ಪ್ರೀತಿಯಿಂದ ಹೇಳಿದ್ದೇನೆ: ಕನ್ನಡ ಬಗ್ಗೆ ಹೇಳಿಕೆಗೆ ಕಮಲ್ ಹಾಸನ್ ವಿವರಣೆ

    May 29, 2025

    ಪುಟಿನ್ ಹುಚ್ಚ: ರಷ್ಯಾ ಅಧ್ಯಕ್ಷ ವಿರುದ್ಧ ಟ್ರಂಪ್ ಕಿಡಿ

    May 26, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ

    June 1, 2025

    ಬೆಂಗಳೂರು: ಮಂಡ್ಯದಲ್ಲಿ  ಟ್ರಾಫಿಕ್ ಪೊಲೀಸರ ಅಮಾನವೀಯ ವರ್ತನೆಗೆ 3 ವರ್ಷದ ಬಾಲಕಿ ಸಾವನ್ನಪ್ಪಿದ ಬಳಿಕ  ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ವಾಹನ…

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು

    June 1, 2025

    ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ!

    June 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.