ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ಉತ್ಸವ ಸಮಿತಿ ವತಿಯಿಂದ ಮಹಾಶಿವರಾತ್ರಿಯ ನಿಮಿತ್ತ 7ನೇ ಮಹಾಪ್ರಸಾದ ಕಾರ್ಯಕ್ರಮವನ್ನು ಆಶ್ರಯ ಕಾಲೋನಿ ಗಣೇಶ ನಗರ್ ದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಫಿರೋಜ್ ಶೇಠ ಭಾಗವಹಿಸಿದ್ದ ಈ ಕಾರ್ಯಕ್ರಮ ಅಲಾರ ವಾಡ್ ಆಶ್ರಯ ಕಾಲೋನಿ ಗಣೇಶ ನಗರ್ ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ಉತ್ಸವದ ವತಿಯಿಂದ ಏಳು ವರ್ಷ ಗಳಿಂದ ಮಹಾಪ್ರಸಾದ ಹಾಗೂ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು ಮಾಜಿ ಶಾಸಕರನ್ನು ಮಹಿಳೆಯರು ತಲೆಯ ಮೇಲೆ ಕುಂಭ ಕೊಡ ಹೊತ್ತುಕೊಂಡು ಮೆರವಣಿಗೆ ಮೂಲಕ ಸ್ವಾಗತ ಮಾಡಿದರು. ಮಂದಿರದ ಆವರಣದಲ್ಲಿ ಧ್ವಜಾರೋಹನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಶಾಸಕ ಇಲ್ಲಿ ಎಲ್ಲಾ ಜಾತಿಯ ಎಲ್ಲಾ ಧರ್ಮದ ಜನರಲ್ಲಿದ್ದಾರೆ.
ಶ್ರೀ ಶಿವಲಿಂಗೇಶ್ವರ ದೇವಸ್ಥಾನ ಮಹಾಪ್ರಸಾದ ನಿಮಿತ್ತ ನಾವೆಲ್ಲರೂ ಇಲ್ಲಿ ಯಾವುದೇ ಜಾತಿ ,ಮತ ,ಧರ್ಮಗಳ ಭೇದವಿಲ್ಲದೆ ಈ ಆಚರಣೆಯಲ್ಲಿ ಎಲ್ಲರೂ ಭಾಗವಹಿಸಿದ್ದಾರೆ.
ನಾವು ಈ ದೇಶ ಅಖಂಡತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಸುದ್ದಿಗಾರರ ಜೊತೆ ಮಾತನಾಡುತ್ತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ರಾಜು ಶೇಠ, ಮಹಾನಗರ ಸೇವಕರು ಮಹಾನಗರ ಪಾಲಿಕೆ ಸದಸ್ಯರಾದ ಬಸವರಾಜ್ ಮಾ ಮೋದಿಗೆಕರ್ , ಕೆಪಿಸಿಸಿ ಸದಸ್ಯರು ಪರಶುರಾಮ್ ವಗ್ಗಣ್ಣವರ, ಕ .ರಾ .ಸರ್ಕಾರಿ ನೌಕರರ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ್ ರಾಯ್ಗೋಳ , ಎ ಪಿಎಂಸಿ ಮಾಜಿ ಉಪಾಧ್ಯಕ್ಷರು ಸುಧೀರ್ ಗಡ್ಡೆ, ದಲಿತ ಮುಖಂಡರಾದ ಸಿದ್ದರಾಯಿ ಮೈತ್ರಿ, ಪ್ರಕಾಶ್ ದೊಡ್ಡಮನಿ, ಮಹಾಪ್ರಸಾದ ಉತ್ಸವ ಸಮಿತಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಪಾಂಡುರಂಗ ಪತ್ತಾರ್, ಬಸವರಾಜ್ ತಳವಾರ್, ಉಪಾಧ್ಯಕ್ಷರು ಶಿವ್ ಕುಮಾರ್ ಅಭಿಗೆರೆ, ವಸಂತ್ ಆರಿ, ಆನಂದ್ ಕಾಂಬಳೆ, ಮಲ್ಲಪ್ಪ ವಾಸನೆ, ಅಸ್ಲಾಂ ಮುಲ್ಲಾಶಿವಾನಂದ್ ಹಂಚಿ, ಜಗದೀಶ್ ಪಾರಿಗಂಟಿ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


