ಸರಗೂರು: ಶಿವರಾತ್ರಿ ರಾಜೇಂದ್ರ ಶ್ರೀಗಳು ನಾಡಿನಾದ್ಯಂತ ನೂರಾರು ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಅಭಾವಿಲಿಂ ಮಹಾಸಭಾ ಕೇಂದ್ರ ಸಮಿತಿ ನಿರ್ದೇಶಕ ಯು.ಎಸ್.ಬಸವರಾಜು ತಿಳಿಸಿದರು.
ಪಟ್ಟಣ ಬಿಡಗಲು ಗ್ರಾಮದ ಪಡುವಲು ವೀರಕ್ತ ಮಠದಲ್ಲಿ ಭಾನುವಾರದಂದು ಪೌರ್ಣಮಿ ಪೂಜೆ ಕಾರ್ಯಕ್ರಮ ಹಾಗೂ ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110 ನೇ ಜಯಂತಿ ಅಂಗವಾಗಿ ಸಂಸ್ಥಾಪಕರ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಸಮಾರಂಭ ಕಾರ್ಯಕ್ರಮವನ್ನು ಜಿಲ್ಲಾ ಶರಣು ಸಾಹಿತ್ಯ ಪರಿಷತ್ ಮೈಸೂರು ಹಾಗೂ ಪಡುವಲು ಶ್ರೀ ವಿರಕ್ತಮಠ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡತನ ಹಾಗೂ ಅಸಮಾನತೆ ನಿರ್ಮೂಲನೆಗೆ ಶ್ರೀಗಳು ಶ್ರಮಿಸಿದ್ದರು. ಅದನ್ನು ಮುಂದುವರಿಸುತ್ತಿರುವ ಸುತ್ತೂರು ಮಠವು ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಕ್ಷೇತ್ರದ ಸಂರಕ್ಷಣೆಗೂ ಶ್ರಮಿಸುತ್ತಿದೆ’ ಎಂದು ಶ್ಲಾಘಿಸಿದರು
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸುತ್ತೂರು ಶ್ರೀಮಠ ದೇಶದ ಉನ್ನತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜೇಂದ್ರ ಶ್ರೀಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಿದ ಮಹಾನ್ ಋಷಿ. ನೂರಾರು ಶಾಲಾ–ಕಾಲೇಜುಗಳು, ವಿದ್ಯಾರ್ಥಿನಿಲಯಗಳನ್ನು ತೆರೆದು ಶಿಕ್ಷಣ ದಾಸೋಹದಲ್ಲಿ ಕ್ರಾಂತಿಯನ್ನೇ ಮಾಡಿದರು’ ಎಂದು ಹೇಳಿದರು.
ದತ್ತಿ ಉಪನ್ಯಾಸ ಭಾಷಣಕಾರರಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪದ್ಮಾಶೇಖರ್ ಮಾತನಾಡಿ ‘ಮೌಲ್ಯಾಧಾರಿತ ಶಿಕ್ಷಣ ನೀಡುವತ್ತ ಗಮನಹರಿಸಿದ ಶ್ರೀಗಳು, ಅಕ್ಷರ, ಅನ್ನ ಹಾಗೂ ಆರೋಗ್ಯ ದಾಸೋಹ ಮಾಡಿದರು. ಆ ಗುರು ಪರಂಪರೆಯ ಹಾದಿಯಲ್ಲಿ ಸಾಗುತ್ತಿರುವ ಶ್ರೀಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೂಡ ದೂರದರ್ಶಿತ್ವ ಮತ್ತು ಸದ್ಭಾವನೆಗಳ ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಿಸಿದ್ದಾರೆ. ದೇಶದೊಂದಿಗೆ ವಿದೇಶದಲ್ಲೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಜೆಎಸ್‌ಎಸ್ ಮಹಾವಿದ್ಯಾಪೀಠ ಹೆಮ್ಮರವಾಗಿ ಬೆಳೆದಿದೆ’ ಎಂದರು.
ಭಾರತೀಯ ಸಂಸ್ಕೃತಿ ಅನಂತವಾದುದು. ಇದನ್ನು ಅನಾದಿ ಕಾಲದಿಂದಲೂ ಸಾಧು–ಸಂತರು ರೂಪಿಸಿಕೊಂಡು ಬಂದಿದ್ದಾರೆ. ಉಳಿಸಲು ಶ್ರಮಿಸುತ್ತಿದ್ದಾರೆ. ವಿಶ್ವ ಬಂಧುತ್ವ ಮತ್ತು ವಿಶ್ವಶಾಂತಿ ಸಾರುವ ಸಂಸ್ಕೃತಿ ನಮ್ಮದು’ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಪಡುವಲು ಶ್ರೀ ವೀರಕ್ತ ಮಠದ ಮಹದೇವಸ್ವಾಮಿಗಳು ಮಾತನಾಡಿ, ‘ರಾಜೇಂದ್ರ ಶ್ರೀ ಮಹಾನ್ ತ್ಯಾಗಮಯಿ. ತ್ಯಾಗದಿಂದಲೇ ಅಮೃತತ್ವವನ್ನು ಸಾಧಿಸಿದವರು. ಹೊಸ ಇತಿಹಾಸ ಬರೆದವರು. ಶ್ರೀಮಠವು ಹಿಮಾಲಯದ ಎತ್ತರಕ್ಕೆ ಬೆಳೆಯಲು ಭದ್ರ ಬುನಾದಿ ಹಾಕಿದವರು. ಲಿಂಗ ಪೂಜೆಗಿಂತ ಜಂಗಮ ಸೇವೆಯೇ ಶ್ರೇಷ್ಠ ಎಂದು ನಂಬಿದ್ದರು. ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡಿದರು. ಮಕ್ಕಳ ಶಿಕ್ಷಣಕ್ಕಾಗಿ ಜೀವನ ಮುಡುಪಾಗಿಟ್ಟರು’ ಎಂದು ನೆನೆದರು.
ಮಡಿವಾಳ ಸ್ವಾಮಿ ಮಠ ಮೈಸೂರು ಬ್ರಹ್ಮ ಶ್ರೀ ಅಡವಿ ಸ್ವಾಮಿ ಮಾತನಾಡಿ, ‘ರಾಜೇಂದ್ರ ಶ್ರೀ ಮಾತೃ ವಾತ್ಸಲ್ಯದ ಮತ್ತೊಂದು ರೂಪವಾಗಿದ್ದರು. ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ಮಠದ ಗುರುಗಳಾಗಿ ಪರಂಪರೆ ಮತ್ತು ಆಧುನಿಕತೆಗಳನ್ನು ಸಮನ್ವಯಗೊಳಿಸಿ ಸೇವಾ ಕಾರ್ಯದಲ್ಲಿ ತೊಡಗಿ ಕಾರ್ಯವ್ಯಾಪ್ತಿಯಲ್ಲಿ ವಿಸ್ತಾರಗೊಳಿಸಿದರು’ ಎಂದು ಸ್ಮರಿಸಿದರು.
ದತ್ತಿ ಎಚ್ ಜೆ ರತ್ನ ಮಹೇಶ್.ದತ್ತಿ ದಾಸೋಹಿಗಳು ವೈ ಟಿ ಮಹೇಶ್.ತಂದೆ ವೈ ಟಿ ತಮ್ಮಯ್ಯ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ.ಹೆಳವರಹುಂಡಿ ಸಿದ್ದಪ್ಪ, ಮೈಸೂರು ಜಿಲ್ಲಾ ಹಾಲು ಒಕ್ಕೂಟ ಹಾಗೂ ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಬಿ.ಎನ್.ಸದಾನಂದ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ, ತಾಲೂಕು ಶರಣ ಸಾಹಿತ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಗುರುಸ್ವಾಮಿ, ಮಠದ ಆಡಳಿತಾಧಿಕಾರಿ ಕೆ.ಕೆಂಪಣ್ಣ, ಸಾಹಿತ್ಯಗಳು ಪುಟ್ಟಪ್ಪ ಮುಡಿಗುಂಡ, ಮುಖಂಡರು ಎಂ.ಎಸ್.ಗಿರೀಶ್ ಕುಮಾರ್, ಗಿರಿ ಕುಮಾರ್, ಭುಜಂಗಪ್ಪ, ಕೆ.ಪಿ.ಮಾದಪ್ಪ ಇನ್ನೂ ಮುಖಂಡರು ಸೇರಿದಂತೆ ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


