ಪಾವಗಡ : ದಸರಾ ಹಬ್ಬದ ರಜೆಗಳನ್ನು ಕಡಿತಗೊಳಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕ್ರಿಶ್ಚಿಯನ್ ಶಾಲೆ ಹಾಗೂ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲ್ಲೂಕು ಕಚೇರಿಯ ಅಧಿಕಾರಿಗಳಿಗೆ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷರಾದ ಅನಿಲ್ ಯಾದವ್ ರವರ ನೇತೃತ್ವದಲ್ಲಿ ಸೋಮವಾರ ಮನವಿ ಪತ್ರವನ್ನು ನೀಡಲಾಯಿತು.
ಹಿಂದೂಗಳ ಪವಿತ್ರ ದಸರಾ ಹಬ್ಬದ ರಜೆಯನ್ನು ನೀಡಿದೆ. ತಾಲ್ಲೂಕಿನ ಹಲವಾರು ಶಾಲೆಗಳು ತರಗತಿ ಮತ್ತು ಪರೀಕ್ಷೆ ನಡೆಸುವ ಮೂಲಕ ಹಿಂದೂ ಧರ್ಮ ಪವಿತ್ರ ದಸರಾ ಹಬ್ಬ ಆಚರಣೆಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ದಸರಾ ಹಬ್ಬದ ರಜೆಯನ್ನು ಕ್ರಿಸ್ಮಸ್ ನಲ್ಲಿ ನೀಡುವ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಹಲವಾರು ವರ್ಷಗಳಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ ಪ್ರೌಢ ಶಾಲೆಗಳು ದಸರಾ ರಜೆ ನೀಡುವುದು ಸಂಪ್ರದಾಯವಾಗಿದೆ. ಈ ಪರಂಪರೆಯನ್ನು ಇತ್ತೀಚಿಗೆ ಉದ್ದೇಶಪೂರ್ವಕವಾಗಿ ತಡೆಯುವ ಷಡ್ಯಂತ್ರ ಇದಾಗಿದೆ ಎನ್ನುವುದು ಹಿಂದೂ ಸಮಾಜದ ವಿದ್ಯಾರ್ಥಿ ಪೋಷಕರಿಂದ ಕೇಳಿ ಬರುತ್ತಿದೆ. ಇದು ಮೇಲ್ನೋಟಕ್ಕೆ ಸತ್ಯ ಸಹ ಅನ್ನಿಸುತ್ತಿದೆ ಎಂದು ಅವರು ಹೇಳಿದರು.
ಹೀಗಾಗಿ ತಕ್ಷಣವೇ ಎಲ್ಲ ಶಾಲೆಗಳಿಗೆ ಕಟ್ಟುನಿಟ್ಟಿನ ರಜೆ ಘೋಷಣೆ ಮಾಡಬೇಕು. ಯಾರಾದ್ರೂ ಉಲ್ಲಂಘಿಸಿದರೆ ಮುಲಾಜಿಲ್ಲದೆ ಶಾಲೆಯ ಅನುಮತಿ ರದ್ದು ಮಾಡಬೇಕು. ಕ್ರಿಸ್ಮಸ್ ರಜೆ ಎಲ್ಲ ಶಾಲೆಗಳಿಗೆ ಕೊಡುವ ಉದ್ದೇಶವಾದರು ಏನಿದೆ ? ಕ್ರಿಶ್ಚಿಯನ್ ಶಾಲೆಯಲ್ಲಿ ಶೇಕಡ 95 ರಷ್ಟು ಹಿಂದೂ ಮಕ್ಕಳು ಓದುತ್ತಿದ್ದು ಯಾಕೆ 10 ದಿವಸ ದಸರಾ ಹಬ್ಬದ ಹೆಚ್ಚುವರಿ ರಜೆ ನೀಡುವುದು? ಇದು ನಿಜಕ್ಕೂ ಧರ್ಮದ ವಿಷಯದಲ್ಲಿ ದೊಡ್ಡ ಪಿತೂರಿ ನಡೆಯುತ್ತಿದ್ದು ತಕ್ಷಣವೇ ದಸರಾ ರಜೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಹಾಗೂ ಕ್ರಿಸ್ಮಸ್ ರಜೆ ರದ್ದುಗೊಳಿಸ ಬೇಕು. ಸರ್ಕಾರದ ಆದೇಶವನ್ನು ಧಿಕ್ಕರಿಸುವಂತಹ ಶಾಲೆಗಳಿಗೆ ಬೀಗ ಜಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮು, ಖಜಾಂಚಿ ಜಿತೇಂದ್ರ ಬಾಬು, ತಾಲೂಕು ಅಧ್ಯಕ್ಷ ರಾಮಾಂಜಿ, ಅಲಕುಂದಿ ರಾಜ್, ತಿರುಮಲೇಶ್, ಮಾರುತಿ, ಸ್ವರೂಪ, ನಿತಿನ್, ನಾಗೇಂದ್ರಯ್ಯ, ರಾಜಕುಮಾರ್, ರಾಮಪ್ಪ, ನಾಗರಾಜು, ಉಮೇಶ್, ಹಾಗೂ ಇನ್ನೂ ಹಲವರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296