ಬೆಳಗಾವಿ : ಜಿಲ್ಲೆಯ ಗಣರಾಜ್ಯೋತ್ಸವ ವೇಳೆ ಮಹಾ ಯಡವಟ್ಟಾಗಿದ್ದು, ಶೂ ಧರಿಸಿಯೇ ಧ್ವಜರೋಹಣ ಮಾಡಿದ ಚಿಕ್ಕೋಡಿ ಉಪವಿಭಾಗಧಿಕಾರಿ ನಡೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಗಣರಾಜ್ಯೋತ್ಸವದ ಧ್ವಜರೋಹಣ ಕಾರ್ಯಕ್ರಮಕ್ಕೆ ಉಪವಿಭಾಗಧಿಕಾರಿ ಮಾಧವ ಅವರು ಸಮಯ ಮೀರಿ ಬಂದಿದಲ್ಲದೇ , ಶೂ ಧರಿಸಿಯೇ ಧ್ವಜರೋಹಣ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬಳಿಕ ಮಾಧವ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡೋದಕ್ಕೆ ಮುಂದಾಗಿದ್ದಾರೆ.ಆಗ ಕಾರ್ಯಕ್ರಮದಲ್ಲಿ ಸೇರಿದ ಸಿಬ್ಬಂದಿಗಳು ತಿಳಿಸಿದ ಬಳಿಕ ಅವರು ಶೂ ಅಲ್ಲೆ ಬಿಚ್ಚಿಟ್ಟಿದ್ದಾರೆ.ಈ ಎಲ್ಲಾ ನಡೆಗೆ ಸಾರ್ವಜನಿಕರು ಸಿಟ್ಟಿಗೆದ್ದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy