ಅರಸೀಕೆರೆ: ಇಲ್ಲಿನ ಸಹಸ್ರಕೂಟ ಜಿನಾಲಯ ದೇಶದಲ್ಲಿ ವಿಶಿಷ್ಟವಾಗಿದ್ದು , ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದವರು ಶ್ರೀ ಕ್ಷೇತ್ರ ಶ್ರವಣಬೆಳಗೊಳ ಸಂದರ್ಶಿಸಲು ಅರಸೀಕೆರೆ ಹೆಬ್ಬಾಗಿಲಾಗಿದ್ದು ,ಈ ಮೂಲಕ ಭಟ್ಟರಕರು, ಮುನಿಗಳು ,ಯಾತ್ರಾತ್ರಿಗಳು, ಮಾತಾಜಿ ಗಳು, ಕಾಲ್ನಡಿಗೆ ಯಲ್ಲಿ ಸಂಚರಿಸಬೇಕಿದೆ ,ಈ ಜಿನಾಲಯವನ್ನು ಅಭಿವೃದ್ಧಿಪಡಿಸಿ ತ್ಯಾಗಿ ಭವನ, ಆಹಾರ ತಯಾರಿಕ ಭವನಗಳೊಂದಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು ತಿಳಿಸಿದರು.
ಅವರು ಶ್ರವಣಬೆಳಗೊಳ ದಿಂದ ಬೆಳಗಾವಿಗೆ ತೆರಳುವ ಮಾರ್ಗ ಮಧ್ಯೆ ನಗರದ ಸಹಸ್ರಕೂಟ ಜಿನಾ ಲಯಕ್ಕೆಭೇಟಿ ನೀಡಿ ,ಬಸದಿ ದರ್ಶನ ಪಡೆದು ಭಕ್ತರನ್ನು ಆಶೀರ್ವದಿಸಿ ಮಾತನಾಡಿದರು.
ಈ ಬಸದಿಗೆ ಶ್ರವಣಬೆಳಗೊಳ ಮಠವು ಎಲ್ಲಾ ರೀತಿಯ ಜವಾಬ್ದಾರಿ ತೆಗೆದುಕೊಂಡು ಒಂದು ಶ್ರದ್ಧಾ ಕೇಂದ್ರವನ್ನಾಗಿ ಮಾಡಲಾಗುವುದು ಎಂದ ಭಟ್ಟರಕ್ಕ ಶ್ರೀಗಳು , ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ, ಜಿಲ್ಲೆಯಲ್ಲಿರುವ ವಿವಿಧ ಜಿನಮಂದಿರಗಳೊಂದಿಗೆ ಒಂದು ಸಾವಿರ ವರ್ಷಗಳಿಗೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಬಸದಿ, ಶ್ರವಣಬೆಳಗೊಳದ ಮಠದ ವ್ಯಾಪ್ತಿಗೆ ಸೇರುತ್ತದೆ .ಈ ಜಿನಾಲಯ ದ ಅಭಿವೃದ್ಧಿಯ ಕನಸು ಹಿರಿಯ ಭಟ್ಟಾರಕ ರಾದ ಕರ್ಮ ಯೋಗಿ ಶ್ರೀ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಆಶಯವಾಗಿದ್ದು ಇದಕ್ಕೆ ಸ್ಥಳೀಯರು ಹಾಗೂ ಮಾಧ್ಯಮಗಳ ಸಹಕಾರ ಅಗತ್ಯ ಬಸದಿಯನ್ನು ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಪರಿಚಯಿಸಲಾಗುವುದು ಎಂದರು.
ಸಹಸ್ರಕೂಟ ಜಿನಾಲಯ ದ ಅಧ್ಯಕ್ಷ ಶಾಂತರಾಜು ಮಾತನಾಡಿ ಇಲ್ಲಿ ನಿತ್ಯ ನಿರಂತರವಾಗಿ ಪೂಜೆ ಕೈಂಕರ್ಯ ಗಳು ನಡೆಯುತ್ತಿದ್ದು, ಭಟ್ಟರಕ ಶ್ರೀಗಳ ಭೇಟಿ ಸಂತಸ ತಂದಿದೆ, ದೇಶದಲ್ಲಿ ಎರಡು ಕಡೆ ಮಾತ್ರ ಸಹಸಕೂಟ ಜಿನಾಲಯವಿದ್ದು ಈ ಪೈಕಿ ಅರಸೀಕೆರೆ ಸಹಸ್ರಕೂಟ ಜಿನಾಲಯವು ಜಿನಾಲಯ ಒಂದಾಗಿದೆ ಎಂದರು.
ಮಹಿಳೆಯರು ಪೂರ್ಣ ಕುಂಭ ಕಳಸಗಳೊಂದಿಗೆ ಪೂಜ್ಯ ಭಟ್ಟರಕ ರಿಗೆ ಸ್ವಾಗತ ನೀಡಿ, ಪಾದಪೂಜೆ ನೆರವೇರಿಸಿದರು.
ಈ ವೇಳೆಯಲ್ಲಿ ಜಿನಾಲಯ ಸಮಿತಿಯ ಖಜಾಂಚಿ ರಾಜು, ಪದಾಧಿಕಾರಿಗಳಾದ ವಸುಪಾಲ್ ಜೈನ್ , ಬಾಹುಬಲಿ ದಂಡಾವತಿ, ಮೃತ್ಯುಂಜಯ, ಮುಕ್ತೇಶ್ ಅರ್ಚಕ ಅಕ್ಷಯ್ ಕುಮಾರ್, ನವರತನ್ , ಸೋಹನ್ ಲಾಲ್, ಬಿ.ವಿ .ಅಶೋಕ್, ಮೋಹನ್ ಲಾಲ್, ಚಕ್ರೇಶ್ವರಿ ಮಹಿಳಾ ಸಂಘದ ಸದಸ್ಯರು ಸೇರಿದಂತೆ ಶ್ರಾವಕ -ಶ್ರಾವಕಿಯರು ವಿವಿಧ ಜೈನ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ, ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx