ಹೊಳೆನರಸೀಪುರ: ಖಾಸಗಿ ಶಾಲೆಗಿಂತ ಏನ್ ಕಮ್ಮಿ ಇಲ್ಲ ಸರ್ಕಾರಿ ಶಾಲೆಯ ಸಮಾರಂಭಗಳು ಎಂದು ಶ್ರವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಮ್.ಎಚ್.ಮಹೆಂದ್ರರವರು ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಶ್ರವಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023–24ನೇ ಸಾಲಿನ ಶಾಲಾ ವಾರ್ಷಿಕೋತ್ಸವವನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಪುಟ್ಟರಾಜು ಅವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ನಮ್ಮ ಶಾಲೆ ಎರಡನೇ ಸ್ಥಾನದಲ್ಲಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಕರೆ ನೀಡಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯತೀಶ್ ಮಾತನಾಡಿ, ತಿಂಗಳಿಗೆ ಒಂದು ಸಲ ಆದರು ಶಾಲೆಗೆ ಭೇಟಿ ನೀಡಿ ಮಕ್ಕಳ ಬಗ್ಗೆ ವಿಚಾರಿಸಿ, ಶಿಕ್ಷಕರಿಗೆ ಪ್ರೋತ್ಸಾಹ ನೀಡಿದರೆ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಶೇಷ ವಿಕಲಚೇತನರ ಮಕ್ಕಳಿಗೆ ಕ್ಷೇತ್ರ ಸಮನ್ವಯ ಸಂಪನ್ಮೂಲ ಶಿಕ್ಷಕರಾದ ಓಂಕಾರಪ್ಪ ಅಂಗವಿಕಲ ದೃಢೀಕರಣ ಪತ್ರ ವಿತರಣೆ ಮಾಡಿದರು.
ಬಣ್ಣ ಬಣ್ಣದ ಉಡುಗೆ ತೊಟ್ಟು ಸುಂದರ ಜಾನಪದ ಮತ್ತು ಚಲನಚಿತ್ರ ಗೀತೆಗಳಿಗೆ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಕೃಷ್ಣೇಗೌಡ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಾಂತ್, ಮೇಕಪ್ ಲೋಕೇಶ್, ಮೋಹನ್ ಆಚಾರ್ಯ, ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ, ವಿರೂಪಾಕ್ಷ ಶಿಕ್ಷಕರು, ಸೋಮಶೇಖರ್ ಶಿಕ್ಷಕರು, ಸುಕನ್ಯಾ ಶಿಕ್ಷಕಿ, ಸುನೀತಾ ಶಿಕ್ಷಕಿ, ಪಾರ್ವತಿ ಶಿಕ್ಷಕಿ, ಡೈರಿ ರಘು ಹಾಗೂ ಶ್ರವಣೂರು ಗ್ರಾಮಸ್ಥರು ಸುತ್ತಮುತ್ತ ಹಳ್ಳಿಯ ಶಾಲಾ ಶಿಕ್ಷಕರರು ಮತ್ತು ಪೋಷಕರು ಉಪಸ್ಥಿತರಿದ್ದರು.
ವರದಿ: ಮಂಜು ಶ್ರವಣೂರು


