ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ನಂದಿಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಜಾತ್ರೋತ್ಸವ ನಡೆಯಿತು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸೋಮಶೇಖರ್ ಬಿ. ಜಾತ್ರೋತ್ಸವದಲ್ಲಿ ಭಾಗವಹಿಸಿ, ರಂಗನಾಥಸ್ವಾಮಿಯ ಗಂಗಾಪೂಜೆಗೆ ಪೂಜೆ ಸಲ್ಲಿಸಿದರು. ಬಳಿಕ ಪಟಾಕಿ ಹಚ್ಚುವ ಮೂಲಕ ಪಟಾಕಿ ಉತ್ಸವಕ್ಕೆ ಚಾಲನೆ ನೀಡಿದರು.
ಶ್ರೀ ರಂಗನಾಥಸ್ವಾಮಿಯ ಜಾತ್ರೆ ಮಹೋತ್ಸವದ ಪಟಾಕಿ ಕಾರ್ಯಕ್ರಮವು ಸಹ ಹಲವಾರು ವಿಧವಿಧವಾದ ಬಣ್ಣಗಳ ಹರುಷದಿಂದ ಪಟಾಕಿ ಉತ್ಸವವು ಸಹ ಬಹಳ ವಿಜೃಂಭಣೆಯಿಂದ ನಡೆಯಿತು.




ಶ್ರೀ ರಂಗನಾಥಸ್ವಾಮಿಯ ಪಟಾಕಿ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ನಂದಿಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮಂಡಳಿಯ ಅಧಿಕಾರಿಗಳು , ದೇವಸ್ಥಾನದ ಅರ್ಚಕರು ಸೋಮಶೇಖರ್ ಬಿ ಅವರಿಗೆ ದೇವಾಲಯದ ಸನ್ನಿಧಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಸೋಮಶೇಖರ್ ಅವರು ಇದೇ ವೇಳೆ ನಮ್ಮತುಮಕೂರು ಜೊತೆಗೆ ಮಾತನಾಡಿ, ರಂಗನಾಥ ಸ್ವಾಮಿ ದೇವರ ದರ್ಶನ ಪಡೆದುಕೊಂಡಿದ್ದು ನಿಜಕ್ಕೂ ನನ್ನ ಸೌಭಾಗ್ಯ. ಅದಲ್ಲದೇ ಇಂದು ಈ ರಂಗನಾಥಸ್ವಾಮಿ ಜಾತ್ರೆಗೆ ಆಗಮಿಸಿರುವುದು ಸಹ ನನಗೆ ತುಂಬಾ ಸಂತೋಷಕರವಾದ ವಿಷಯವಾಗಿದೆ ಶ್ರೀ ರಂಗನಾಥ ಸ್ವಾಮಿಯು ಎಲ್ಲರಿಗೂ ಆರೋಗ್ಯ, ಆಯಸ್ಸು ಹೆಚ್ಚಿನ ರೀತಿಯಲ್ಲಿ ಕೊಟ್ಟು ಕಾಪಾಡಲಿ, ಭಗವಂತನ ಕೃಪೆಯಿಂದ ಹೆಚ್ಚಿನ ರೀತಿಯಲ್ಲಿ ಮಳೆ ಬೆಳೆಯು ಸಹ ಆಗಲಿ. ಎಂದಿನಂತೆ ಜನರ ಮುಖದಲ್ಲಿ ಸಂತೋಷದ ಹರುಷ ತುಂಬಿರಲಿ ಎಂದು ಹಾರೈಸಿದರು.
ಚಿತ್ರದುರ್ಗ ಜಿಲ್ಲೆಯ ಮಾಜಿ ಸದಸ್ಯರಾದ ಜವನಗೊಂಡನಹಳ್ಳಿ ಕರಿಯಾಲ, ಗ್ರಾಮದ ಕಾಡುಗೊಲ್ಲ ಸಮುದಾಯದ ಮುಖಂಡರಾದ ಪಾಪಣ್ಣ , ಗ್ರಾಮದ ಮುಖಂಡರುಗಳು ನಮ್ಮತುಮಕೂರು ಜೊತೆಗೆ ಮಾತನಾಡಿದರು.
ದೇವಸ್ಥಾನದ ಉತ್ಸವಕ್ಕೆ ಆಗಮಿಸುವಂತಹ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ನಂಜಯ್ಯನಕೊಟ್ಟಿಗೆ ಅವಿನಾಶ್, ರಾಮಕೃಷ್ಣ ಆರ್. , ಮಾಜಿ ಅಧ್ಯಕ್ಷರಾದ ಜೈರಾಂ, ಸಿದ್ದೇಶ್, ಪೋಲಿಸ್ ಚಂದ್ರಪ್ಪ, ಬೆಣ್ಣೆ ಈರಪ್ಪನ ಹಟ್ಟಿ ನಿಜಲಿಂಗಪ್ಪ, ಜೂಲಯ್ಯನಹಟ್ಟಿ ರಾಮಕೃಷ್ಣ, ನಂದಿಹಳ್ಳಿ ನಾಗರಾಜ್, ಪೂಜಾರಿ ರಂಗಪ್ಪ , ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರುಗಳು , ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


