nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮನುಕುಲದ ಉದ್ದಾರವೇ ಶ್ರೇಷ್ಟವೆಂದು ಕೈವಾರ ತಾತಯ್ಯ ನಂಬಿದ್ದರು: ಎಸ್.ಎನ್.ಚನ್ನಬಸಪ್ಪ

    March 4, 2026

    ಧಾರವಾಡ: ಮಾ.5ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣಾರ್ಥ ಭೀಮ ಗಾಯನ ಆಯೋಜನೆ

    March 4, 2026

    ಧಾರವಾಡ: ಶ್ರೀಯೋಗಿನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮ

    March 4, 2026
    Facebook Twitter Instagram
    ಟ್ರೆಂಡಿಂಗ್
    • ಮನುಕುಲದ ಉದ್ದಾರವೇ ಶ್ರೇಷ್ಟವೆಂದು ಕೈವಾರ ತಾತಯ್ಯ ನಂಬಿದ್ದರು: ಎಸ್.ಎನ್.ಚನ್ನಬಸಪ್ಪ
    • ಧಾರವಾಡ: ಮಾ.5ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣಾರ್ಥ ಭೀಮ ಗಾಯನ ಆಯೋಜನೆ
    • ಧಾರವಾಡ: ಶ್ರೀಯೋಗಿನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮ
    • ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್; ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ ಮಹಿಳೆ!
    • ಖಾಲಿ ಹುದ್ದೆಗಳ ನೇಮಕಾತಿಗೂ ಮುನ್ನ ಒಳ ಮೀಸಲಾತಿ ಜಾರಿಗೆ ಎಲ್ಲರ ವಿಶ್ವಾಸ ತೆಗೆದುಕೊಳ್ಳಿ: ಬಸವರಾಜ ಬೊಮ್ಮಾಯಿ ಆಗ್ರಹ
    • ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ವಿಜಲ್ ಬ್ಲೋವರ್  ಪಾಲಿಸಿ ಜಾರಿ: ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಮುಕ್ತ ಅವಕಾಶ
    • ಕೊರಟಗೆರೆ: ಜೂನ್–ಜುಲೈ ವೇಳೆಗೆ ತಲುಪಲಿದೆ ಎತ್ತಿನಹೊಳೆ ನೀರು: ಸಚಿವ ಡಾ.ಜಿ.ಪರಮೇಶ್ವರ್ ಭರವಸೆ
    • ತುರುವೇಕೆರೆ ರಾಗಿ ಖರೀದಿ ಕೇಂದ್ರ: ಎಪಿಎಂಸಿ ರಸ್ತೆಯುದ್ದಕ್ಕೂ ರಾಗಿ ತುಂಬಿದ ಟ್ರ್ಯಾಕ್ಟರ್‌ ಗಳ ಕ್ಯೂ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ದಾಸೋಹಸ್ವರೂಪರು
    ಸ್ಪೆಷಲ್ ನ್ಯೂಸ್ January 21, 2023

    ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ದಾಸೋಹಸ್ವರೂಪರು

    By adminJanuary 21, 2023No Comments2 Mins Read
    siddaganga

    ಕಳೆದ ವಾರ ನಮಗೆಲ್ಲ ಸಂಕ್ರಾಂತಿ ಹಬ್ಬ.
    ನಾಳೆ ನಮಗೆಲ್ಲ ದಾಸೋಹ ಹಬ್ಬ.

    ನಾಳೆ ದಾಸೋಹ ದಿನ.


    Provided by
    Provided by

    ಲಿಂಗೈಕ್ಯ ಪರಮಪೂಜ್ಯ
    ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ
    ನೆನಹಿನಲ್ಲಿ ಎಲ್ಲರೂ ದಾಸೋಹ ದಿನವನ್ನು
    ಭಕ್ತಿ, ಶ್ರದ್ಧೆಯಿಂದ ಆಚರಿಸುವಾ.

    ಅವತ್ತು 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರಿಂದ
    ಅರಿವು, ಆಚಾರ, ಅನುಭವಗಳ ತ್ರಿವಿಧ ದಾಸೋಹ.

    21ನೇ ಶತಮಾನದಲ್ಲಿ ಲಿಂಗೈಕ್ಯ
    ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಂದ
    ಸಹಸ್ರ ಸಹಸ್ರ ಮಕ್ಕಳಿಗೆ
    ಅನ್ನ, ವಸತಿ, ಶಿಕ್ಷಣಗಳ ತ್ರಿವಿಧ ದಾಸೋಹ.

    ಅವತ್ತು, ಆ ಶತಮಾನದಲ್ಲಿ
    ಅಣ್ಣ ಬಸವಣ್ಣನವರದು ಅಹೋಸಾಧನೆ.

    ಈ ಶತಮಾನದಲ್ಲಿ ಪರಮಪೂಜ್ಯ
    ಡಾ. ಶಿವಕುಮಾರ ಮಹಾಸ್ವಾಮಿಗಳವರದು
    ಮಹಾಸಾಧನೆ, ಮಹತ್ ಸಾಧನೆ.

    ಅಣ್ಣ ಬಸವಣ್ಣ ಭಕ್ತಿಭಂಡಾರಿ.
    ನಮ್ಮ ಶಿವಕುಮಾರ ಮಹಾಸ್ವಾಮಿಗಳು
    ದಾಸೋಹಭಂಡಾರ.

    ಅವರು ದಾಸೋಹವೂ ಅಹುದು;
    ಅವರು ಭಂಡಾರವೂ ಅಹುದು.

    ಉತ್ತರ ಭಾರತದಲ್ಲಿ “ಭಂಡಾರ, ಭಂಡಾರಾ” ಎಂದರೆ
    “ಸಾಧುಭೋಜ, ಸಾಧುಭೋಜನ” ಎಂದರ್ಥ.

    ಸಾಧು, ಸತ್ಪುರುಷ, ಸಂತರಿಗೆ
    ಸೇವಾರ್ಥ ನೀಡುವ ಭೋಜನಕ್ಕೆ
    “ಭಂಡಾರಾ” ಎಂದು ಕರೆಯುತ್ತಾರೆ.

    ಸಿದ್ಧಗಂಗಾ ಮಠದಲ್ಲಿ
    ಬರೀ ಸಹಸ್ರಾರು ವಿದ್ಯಾರ್ಥಿಗಳು ಮಾತ್ರವಲ್ಲ,

    ದಿನನಿತ್ಯದಲ್ಲೂ ನೂರಾರು ಜನ
    ಸಾಧು, ಸಂತರು ಮತ್ತು ಸಾವಿರಾರು ಜನ
    ಭಕ್ತರು ಪ್ರಸಾದವನ್ನು ಸ್ವೀಕರಿಸುತ್ತಾರೆ.

    ಯಾರಾದರೂ
    “ಇದೀಗ ತಾನೆ ಸಿದ್ಧಗಂಗಾ ಮಠಕ್ಕೆ
    ಹೋಗಿಬಂದಿದ್ದೇವೆ” ಎಂದು ಹೇಳಿದಾಗ,

    “ಊಟ ಆಯ್ತಾ, ಪ್ರಸಾದ ಆಯ್ತಾ?” ಎಂದು ಕೇಳಿದರೆ
    ಅವರಿಗೆ ಸಿದ್ಧಗಂಗಾ ಮಠದ ಪರಿಚಯವಿಲ್ಲ;

    ಅವರಿಗೆ ಸಿದ್ಧಗಂಗಾ ಮಠದ ಕುರಿತು
    “ಅ ಬ ಕ…”ಗಳು ಗೊತ್ತಿಲ್ಲವೆಂದರ್ಥ.

    ಸಿದ್ಧಗಂಗಾ ಮಠವೆಂದರೆ ಪ್ರಸಾದ.
    ಸಿದ್ಧಗಂಗಾ ಮಠವೆಂದರೆ ದಾಸೋಹ.

    ಯಾವ ರೀತಿ ಕಾಶಿ ಎಂದರೆ
    ಗಂಗಾಸ್ನಾನ ಮತ್ತು ವಿಶ್ವನಾಥ ದರ್ಶನವೋ,

    ಹಾಗೆ ಸಿದ್ಧಗಂಗಾ ಮಠವೆಂದರೆ
    ಪ್ರಸಾದ, ದಾಸೋಹ ಮತ್ತು ವಿದ್ಯಾರ್ಥಿಗಳು.

    ನಾವುಗಳು ನಮ್ಮ ಮಧ್ಯದಲ್ಲಿ
    ಮಹಾನ್ ನಿರಂಜನ ಪ್ರಣವಸ್ವರೂಪಿ (ಮ. ನಿ. ಪ್ರ.)
    ಸ್ವಾಮಿಗಳನ್ನು ನೋಡಿರುತ್ತೇವೆ.
    ನಮ್ಮ ಡಾ. ಶಿವಕುಮಾರ ಮಹಾಸ್ವಾಮಿಗಳು
    ಮಹಾನ್ ನಿರಂಜನ ಪ್ರಣವಸ್ವರೂಪಿಗಳು
    (ಮ ನಿ ಪ್ರ) ಮಾತ್ರವಲ್ಲ;
    ಅವರು ದಾಸೋಹಪ್ರಿಯ ಸ್ವಾಮಿಗಳು ಕೂಡ ಅಹುದು.
    ಅವರು ಮಹಾನ್ ತ್ರಿವಿಧದಾಸೋಹಸ್ವರೂಪರು ಕೂಡ ಅಹುದು.

    ಶಿವ, ಪಾರ್ವತಿಯರು “ವಾಗರ್ಥಾವಿವ”.
    ಡಾ. ಶಿವಕುಮಾರ ಮಹಾಸ್ವಾಮಿಗಳು
    “ಧರ್ಮ-ದಾಸೋಹವಿವ”

    ಪರಮಪೂಜ್ಯರು
    ಧರ್ಮ ಮತ್ತು ದಾಸೋಹದ ಮೂರ್ತರೂಪ.

    ಪೂಜ್ಯರ ದೃಷ್ಟಿಯಲ್ಲಿ,

    ಧರ್ಮವೆಂದರೆ ದಾಸೋಹ;
    ದಾಸೋಹವೆಂದರೆ ಧರ್ಮ.

    ಅವರಲ್ಲಿ ಧರ್ಮ ಹಾಗೂ ದಾಸೋಹಗಳು
    ಅನನ್ಯಗೊಂಡಿದ್ದವು.

    ದಾಸೋಹ ದಿನದಂದು ಪರಮಪೂಜ್ಯ
    ಡಾ. ಶಿವಕುಮಾರ ಮಹಾಸ್ವಾಮಿಗಳವರ
    ವ್ಯೋಮಕಾಯಕ್ಕೆ
    ಮತ್ತು ಅವರ ಅನಿಕೇತನ-ಚೇತನಕ್ಕೆ
    ಭಕ್ತಿ ಮತ್ತು ಶ್ರದ್ಧೆಯಿಂದ ನಮಸ್ಕರಿಸುವಾ.

    ಅವರ ಪುಣ್ಯಸ್ಮರಣೆಯಿಂದ ಧನ್ಯತೆಯ ಅನುಭವಕ್ಕೆ
    ನಮ್ಮನ್ನು ನಾವು ವೇದಿಕೆಯಾಗಿಸಿಕೊಳ್ಳುವಾ.

    -ಡಾ. ಶಿವಾನಂದ ಶಿವಾಚಾರ್ಯರು
    ಹಿರೇಮಠ, ತಪೋವನ, ತುಮಕೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    admin
    • Website

    Related Posts

    ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್; ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ ಮಹಿಳೆ!

    March 3, 2026

    ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯ; ದೃಢಪಡಿಸಿದ ಇರಾನ್ ಸರ್ಕಾರಿ ಟಿವಿ

    March 1, 2026

    ವೆನೆಜುವೆಲಾದ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

    October 10, 2025

    Comments are closed.

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮನುಕುಲದ ಉದ್ದಾರವೇ ಶ್ರೇಷ್ಟವೆಂದು ಕೈವಾರ ತಾತಯ್ಯ ನಂಬಿದ್ದರು: ಎಸ್.ಎನ್.ಚನ್ನಬಸಪ್ಪ

    March 4, 2026

    ಶಿವಮೊಗ್ಗ:  ಮಾನವರೆಲ್ಲರೂ ಒಂದೇ. ಮನುಕುಲದ ಉದ್ದಾರವೇ ಶ್ರೇಷ್ಟ ಎಂದು ಕೈವಾರ ತಾತಯ್ಯನವರು ನಂಬಿದ್ದು, ಮನುಕುಲದ ಉದ್ದಾರದ ಕುರಿತು ಸಾಕಷ್ಟು ಕೀರ್ತನೆಗಳನ್ನು…

    ಧಾರವಾಡ: ಮಾ.5ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣಾರ್ಥ ಭೀಮ ಗಾಯನ ಆಯೋಜನೆ

    March 4, 2026

    ಧಾರವಾಡ: ಶ್ರೀಯೋಗಿನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮ

    March 4, 2026

    ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್; ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ ಮಹಿಳೆ!

    March 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.