ತಿಪಟೂರು: ವಿನಾಯಕ ನಗರದ ರಾಘವೇಂದ್ರ ಬಡಾವಣೆಯ ಅಯೋಧ್ಯ ಶ್ರೀ ರಾಮ ವಿದ್ಯಾರ್ಥಿ ಮತ್ತು ನಾಗರೀಕರ ಬಳಗದ ವತಿಯಿಂದ ಅಯೋಧ್ಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ಭಾವಚಿತ್ರಕ್ಕೆ ಪುಷ್ಪಾರ್ಚನೆ, ವಿಶೇಷ ಪೂಜೆ, ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು.
ಇದೇ ವೇಳೆ ಬಡಾವಣೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಆಯೋಜಿಸಲಾಗಿತ್ತು. ನಗರಸಭಾ ಸದಸ್ಯ ಸಂಗಮೇಶ್ (ಕೇಬಲ್), ಸಾಹಿತಿ ದಿಬ್ಬದಹಳ್ಳಿ ಶ್ಯಾಮ ಸುಂದರ್ ಹಾಗೂ ಚಿತ್ರಾ ಗ್ಲಾಸ್ ನ ತೋಂಟದಾರ್ಯ ಉದ್ಘಾಟಿಸಿ, ಮಾತನಾಡಿದರು.
ಕೃಷ್ಣಪ್ರಸಾದ್, ಶಿವಾಜಿ, ಸಂಗೀತ ರಮೇಶ್, ಉತ್ತಮ್ ಮತ್ತು ರಂಗನಾಥ್ ಸೇರಿದಂತೆ ಬಡಾವಣೆಯ ಮಹಿಳೆಯರು,ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು


