ಅಡಿಲೇಡ್’ನಾ ಓವಲ್ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಆಶಸ್ ಸರಣಿಯ ಎರಡನೇ ಪಂದ್ಯದ ಮೊದಲನೇ ದಿನದ ಮೊದಲ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 221 ರನ್ಗಳ ಸಾಧಾರಣ ಮೊತ್ತ ಗಳಿಸಿ ಸುಸ್ಥಿತಿಯಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಯಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್’ರವರ ನಿರ್ಧಾರವನ್ನು ತಪ್ಪು ಎಂದೆನಿಸುವಂತೆ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿತು.
ಆಸ್ಟ್ರೇಲಿಯಾ ತಂಡದ ಮೊತ್ತ 4 ಆಗಿದ್ದಾಗ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕಸ್ ಹ್ಯಾರಿಸ್ 3 (28) ರವರು ಸ್ಟುವರ್ಟ್ ಬ್ರಾಡ್’ರವರ ಬೌಲಿಂಗ್’ನಲ್ಲಿ ಜೋಸ್ ಬಟ್ಲರ್ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರ.
ನಂತರ ಒಂದಾದ ವಾರ್ನರ್ 95(167) ಮತ್ತು ಲ್ಯಾಬಶೇನ್ 102(299)* ಜೋಡಿ ಆಸಿಸ್’ನಾ ಆರಂಭಿಕ ಆಘಾತದಿಂದ ಪಾರು ಮಾಡಿ ತಂಡದ ಮೊತ್ತ ಸುಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.
ಈ ಜೋಡಿ ಬರೋಬ್ಬರಿ 172 ರನ್’ಗಳ ಜೊತೆಯಾಟವಾಡಿತು.
ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ 240 ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿಯಲ್ಲಿದೆ.
ಕ್ರೀಸ್ನಲ್ಲಿರುವ ಲ್ಯಾಬಶೇನ್ ಶತಕ 102(299)* ಪೂರೈಸಿದ್ದಾರೆ.ಇವರಿಗೆ ಜೊತೆಯಾಗಿ ನಾಯಕ ಸ್ಟೀವನ್ ಸ್ಮಿತ್ 27(93)* ಬ್ಯಾಟಿಂಗ್ ನಡಿಸುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್
ವಾರ್ನರ್ 95(167)
ಲ್ಯಾಬಶೇನ್ 102(299)*
ಸ್ಟೀವನ್ ಸ್ಮಿತ್ 27(97)*
ಸ್ಟುಬರ್ಟ್ ಬ್ರಾಡ್ 40ಕ್ಕೆ 1
ವರದಿ : ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700