ಪಾವಗಡ: ತಾಲ್ಲೂಕಿನ್ಯಾದಂತ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಬೇಕೆಂದು ಇಂದು ಪಾವಗಡ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯನ್ನು ಉದ್ದೇಶಿಸಿ ಎನ್.ಎ.ಈರಣ್ಣ ಮಾತನಾಡಿ, ನಮ್ಮ ಮಾಜಿ ಶಾಸಕರ ತಿಮ್ಮರಾಯಪ್ಪರ ಅವಧಿಯಲ್ಲಿ ತಾಲ್ಲೂಕಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಅಧಿವೇಶನ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕಗಳು ಅನುಮೋದನೆ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಿಸಿದ್ದರು ಎಂದರು.
ತಾಲ್ಲೂಕಿಕು ಅಧ್ಯಕ್ಷರಾದ ಬಲರಾಮರೆಡ್ಡಿ ಮಾತನಾಡಿ, ನಮ್ಮ ಮಾಜಿ ಶಾಸಕರ ಅವಧಿಯಾದ ನೀರಿನ ಘಟಕಗಳು ಹಾಲಿ ಶಾಸಕರ ಅವಧಿಯಲ್ಲಿ ದುರಸ್ತಿ ಪಡಿಸಲಾಗದೆ ಕೆಟ್ಟು ನಿಂತಿವೆ ಎಂದರು. ಹಾಲಿ ಶಾಸಕರು ಜನರಿಗೆ ಕನಿಷ್ಠ ಕುಡಿಯುವ ನೀರನ್ನು ಕೊಡಲಾಗದೆ ನಿಸ್ಸೀಮರಾಗಿದ್ದಾರೆಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಲರಾಮರೆಡ್ಡಿ, ಎನ್.ಎ. ಈರಣ್ಣ, ರಾಜಶೇಖರಪ್ಪ, ಅಕ್ಕಲಪ್ಪನಾಯ್ಡು, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯೂನಸ್, ನಗರ ಘಟಕದ ಅಧ್ಯಕ್ಷರಾದ ಗಡ್ಡಂ ತಿಮ್ಮ, ನಲ್ಲಪ್ಪ, ಲಕ್ಷ್ಮೀ ನರಸಪ್ಪ, ಕಾವಗೇರಿ ರಾಮಾಂಜಿ, ವಸಂತ, ಮನು, ಜಿ.ಎ.ವೆಂಕಟೇಶ್, ಗಂಗಾಧರ ನಾಯ್ಡು, ಲೆಪ್ಟ್ ನಾಗರಾಜು, ತೆಂಗಿನಕಾಯಿ ವೆಂಕಟೇಶ್, ನಾರಾಯಣಪ್ಪ, ಧರ್ಮಪಾಲ್, ಸುಬ್ಬರಾಯಪ್ಪ, ಕೊಡಮಗುಡು ಕೃಷ್ಣಪ್ಪ, ಜಯರಾಮಪ್ಪ, ಅಂಜನ್ ಕುಮಾರ್, ಶಿವಕುಮಾರ್, ರಾಮಕೃಷ್ಣ ರೆಡ್ಡಿ, ಬಸವರಾಜು, ಈರಪ್ಪ, ಕೃಷ್ಣಮೂರ್ತಿ, ಲೋಕೇಶ್, ಮಂಜುನಾಥ ಹಾಗೂ ಇನ್ನೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA