ಗದಗ: ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗ ಗದಗನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ವಸಿತಿ ನಿಲಯದ ವಿದ್ಯಾರ್ಥಿಗಳಿಗೆ ಶ್ಯಾವಿಗೆ ಪಾಯಸದ ಅಡುಗೆ ಮಾಡಿದ್ದಾರೆ. ಪಾಯಸ ಊಟ ಮಾಡುವಾಗ ಅದರಲ್ಲಿ ಹುಳುಗಳನ್ನು ಕಂಡು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಊಟವಿಲ್ಲದೆ ರಾತ್ರಿ 12 ಗಂಟೆಯವರೆಗೆ ಪರದಾಡಿದ್ದಾರೆ.
ರಾತ್ರಿ 12ಗಂಟೆವರೆಗೆ ಹಸಿವಿನಿಂದ ಬಳಲಿದ ವಿದ್ಯಾರ್ಥಿಗಳು ರಾತ್ರೋರಾತ್ರಿ ವಸತಿ ನಿಲಯದ ವಾರ್ಡನ್ ಬಿ ಎಸ್ ಗೂಡಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಂತರ ವಸತಿ ಶಾಲೆಯ ಸಿಬ್ಬಂದಿ ಬೇರೆ ಅಡುಗೆ ಮಾಡಿ, ಹಸಿದ ಮಕ್ಕಳಿಗೆ ಬಡಿಸಿದ್ದಾರೆ. ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಮನವಿ ಮಾಡಿಕೊಂಡಿದ್ದಾರೆ.
ವರದಿ ಆಂಟೋನಿ ಬೇಗೂರು