ಕೊರಟಗೆರೆ: ದೇಶದಲ್ಲಿ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ದಾಸೋಹ ಭಂಡಾರವಾದರೆ, ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಜ್ಞಾನ ಭಂಡಾರವಾಗಿದ್ದರು. ಈ ಮಹಾನ್ ಗುರುಗಳು ಜಗತ್ತಿನಲ್ಲಿ ಎಲ್ಲರಿಗೂ ಸರ್ವಕಾಲದ ಆದರ್ಶವಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರಶೀವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಪಟ್ಟಣದ ಸಜ್ಜನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಸ್ವಾಮಿಗಳ 4 ನೇ ಪುಣ್ಯಸ್ಮರಣೆ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಮಾತನಾಡಿ, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಉದ್ದಾನ ಶ್ರೀಗಳಿಂದ ಪ್ರಾರಂಭವಾದ ದಾಸೋಹ ಶಿವಕುಮಾರ ಸ್ವಾಮಿಗಳ ಪೀಠಾಧ್ಯಕ್ಷ ಕಾಲದಲ್ಲಿ ದಿನಕ್ಕೆ ಸಾವಿರಾರು ಮಂದಿಗೆ ದಾಸೋಹ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ನಡೆಯುತ್ತಿದ್ದು ಇದು ಸಾಮಾನ್ಯ ಕಾರ್ಯವಲ್ಲ, ದೇಶದಲ್ಲೇ ಇದೊಂದು ಮಹತ್ತರ ಧಾರ್ಮಿಕ ಕಾರ್ಯವಾಗಿದ್ದು ಶಿವಕುಮಾರ ಸ್ವಾಮಿಗಳ ಸಾಧನೆ ಅತಿ ಎತ್ತರದು, ಇದರೋಂದಿಗೆ ರೈತರಿಗೆ ನೆರವಾಗಲೂ ಸಿದ್ದಾಗಂಗಾ ಜಾತ್ರೆಯಲ್ಲಿ ಕೃಷಿ ಮೇಳವನ್ನು ಮಾಡಿಕೊಂಡು ಬರುತ್ತಿದ್ದರು ಅವರ ಪುಣ್ಯಸ್ಮರಣೆಯ ದಿನದಂದು ಸರ್ಕಾರವೂ ಸೇರಿದಂತೆ ಎಲ್ಲರೂ ದಾಸೋಹ ದಿನವನ್ನಾಗಿ ಆಚರಿಸುತ್ತಿದ್ದಾರೆ ಎಂದರು.
ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಕೊಟ್ಯಾಂತರ ಮಂದಿಗೆ ಜ್ಞಾನವನ್ನು ದಾಸೋಹದ ರೀತಿಯಲ್ಲಿ ಬಡಸಿದ್ದಾರೆ, ಕನ್ನಡ, ಸಂಸ್ಕøತ, ಇಂಗ್ಲಿಸ್ ಸೇರಿದಂತೆ ಐದಾರು ಬಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಸಿದ್ದೇಶ್ವರ ಶ್ರೀ ಗಳ ಪ್ರವಚನದಲ್ಲಿ 50 ಸಾವಿರದಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರೂ ಕೂಡ ಅವರ ಪ್ರವಚನ ನಿಶಬ್ದದಿಂದ ನಡೆಯುತ್ತಿದ್ದು ಪವಾಡವೇ ಸರಿ, ಇವರು ಜೇಬಿಲ್ಲದ ಅಂಗಿಯ ರಾಷ್ಟ ಸಂತರಾಗಿದ್ದು ಯಾರಿಂದಲೂ ಕಾಣಿಕೆ ಪಡೆಯುತ್ತಿರಲ್ಲಿಲ್ಲ, ಸಿದ್ದೇಶ್ವರರು ಬಡತನ, ಜಿಗುಪ್ಸೆಯಿಂದ ವೈರಾಗ್ಯಕ್ಕೆ ಬಾರಲ್ಲಿಲ್ಲ, ಹುಟ್ಟಿದಾಗಲಿಂದಲೂ ಅತಿ ಶ್ರೀಮಂತರಿದ್ದರೂ ಜ್ಞಾನ ಸಂಪಾದನೆಗೆ ವೈರಾಗ್ಯ ಪಡೆದವರು, ಅವರ ಜೀವನ ಶೈಲಿ ಆಚಾರ ವಿಚಾರ ಎಲ್ಲರಿಗೂ ಅದರ್ಶವಾಗಿದ್ದು ಅವರ ಮರಣ ದಿನ ಲಕ್ಷಾಂತರ ಭಕ್ತರ ಜನಸಾಗರ ಮತ್ತು ದು;ಖವೇ ಸಾಕ್ಷಿಯಾಗಿದೆ ಈ ಇಬ್ವರು ವiಹಾನ್ ಸಾಧಕರ ಪುಣ್ಯಸ್ಮರಣೆಯನ್ನು ಬಸವೇಶ್ವರ ದೇವಾಲಯದ ಮಂಡಲಿ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರದಲ್ಲಿ ಬಸವೇಶ್ವರ ದೇವಾಲಯ ಮಂಡಲಿ ಅದ್ಯಕ್ಷ ಕೆ.ಎಂ.ಸುರೇಶ್, ಸರ್ಕಾರಿ ನೌಕರ ಸಂಘದ ಅದ್ಯಕ್ಷ ರುದ್ರೇಶ್, ಟಿ.ಎ.ಪಿ.ಸಿ.ಎಂ.ಎಸ್. ನಿರ್ದೇಶಕ ಪವನ್‍ಕುಮಾರ್, ಮಂಡಳಿಯ ಕಿರಣ್, ಜಗದೀಶ್, ದರ್ಶನ್, ಚಂದ್ರಶೇಖರ್, ಶಿವಕುಮಾರ್, ಸದಾಶಿವಯ್ಯ, ಪರ್ವತಯ್ಯ, ಶರಣಪ್ಪ, ಮಹಿಳಾ ಮಂಡಲಿಯ ಮಮತ, ದಾಕ್ಷಾಯಿಣಿ, ವಿಜಯಲಕ್ಷೀ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ. ಎಂ. ಎನ್.ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


