ಪತ್ರಿಕಾರಂಗದಲ್ಲಿ ಇರುವವರು ಆರ್ಥಿಕವಾಗಿ ಇದ್ದಾರೆ ಎಂದುಕೊಂಡಿದ್ದಾರೆ. ಆದರೆ ಅವರು ಪಡುವ ಕಷ್ಟವನ್ನು ನಾನು ಕಾಣ್ಣಾರೆ ನೋಡಿದ್ದೇನೆ. ಹಾಗೆಯೇ ಕೋವಿಡ್ ಸಮಯದಲ್ಲಿ ಅವರ ಕಷ್ಟ, ನೋವು ಹೇಳತೀರದು. ಪತ್ರಕರ್ತರ ಉತ್ತಮ ಜೀವನ ಮತ್ತು ಅನಾನುಕೂಲಗಳಿಗೆ ಸ್ಪಂದಿಸುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ನ ಸಿದ್ದರಾಮಯ್ಯ ನವರ ಸರ್ಕಾರ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಹೇಳಿದ್ರು..
ಹಾಸನ ನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಮಾಧ್ಯಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮಗಳ ಪಿಂಚಣಿಯನ್ನು ಹೆಚ್ಚಿಸಿದ್ದು, ಸಿದ್ದರಾಮಯ್ಯನವರು, ಇಂದಿನ ದಿನಗಳಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಹಾಗೆಯೇ ನಿಮ್ಮ ಬರಹ ಆರೋಗ್ಯಕವಾಗಿರಲಿ, ಮುಂದಿನ ದಿನಗಳಲ್ಲಿ ಯಶಸ್ವಿನಿ ಯೋಜನೆಯ ಲಾಭಗಳು ಪತ್ರಿಕೋದ್ಯಮದ ಮಿತ್ರರಿಗೂ ಸಿಗುವ ಹಾಗೆ ಪ್ರಯತ್ನ ಮಾಡುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಶಾಸಕರಾದ ಶಿವಲಿಂಗೇ ಗೌಡ, ಸ್ವರೂಪ್ ಪ್ರಕಾಶ್, ಶಿವಾನಂದ ತಗಡೂರು, ಶ್ರೇಯಸ್ ಪಟೇಲ್ ಹಾಗೂ ಹಾಸನ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.




ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


