ಮಂಗಳೂರು: ನಾನು ಅವರಿಗೆ ನಾಯಿ ಮರಿ ಅಂಥ ಹೇಳಿಲ್ಲ. ಧೈರ್ಯ ಇರಬೇಕು ಅಂದೆ. ನಮಗೆ ರಾಜ್ಯದ ಹಿತ ಮುಖ್ಯ. ಕೇಂದ್ರದ ಜೊತೆ ಧೈರ್ಯವಾಗಿ ಮಾತನಾಡಿ ಅಂದೆ. ಧೈರ್ಯವಾಗಿ ಇರಬೇಕು, ನಾಯಿ ಮರಿ ಥರ ಇರಬಾರದು ಅಂದೆ. ಇದರಲ್ಲಿ ತಪ್ಪು ಏನು ಇದೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಅವರ ಕುರಿತು ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಸಂಬಂಧ ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ನನಗೆ ಟಗರು, ಹುಲಿಯಾ ಅಂತೆಲ್ಲಾ ಕರೀತಾರೆ, ಅದು ಅನ್ ಪಾರ್ಲಿಮೆಂಟರಿ ಅಲ್ಲ ಅಂದರು. ಯಡಿಯೂರಪ್ಪನನ್ನ ರಾಜಾ ಹುಲಿ ಅಂತಾರೆ, ಅದು ಅನ್ ಪಾರ್ಲಿಮೆಂಟರಿಯಾ? ಯಡಿಯೂರಪ್ಪ ಹುಲೀನಾ? ನಾಯಿ ಅನ್ನೋದು ನಂಬಿಕೆ ಇರೋ ಪ್ರಾಣಿ, ಧೈರ್ಯ ಇರಬೇಕು ಅಂದೆ. ನಮ್ಮ ಪಾಲನ್ನ ಕೇಂದ್ರದ ಜೊತೆ ಧೈರ್ಯವಾಗಿ ಕೇಳಿ ಅಂದರು.
ಉಳ್ಳಾಲ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಸುದ್ದಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅಲೆಮಾರಿ ರಾಜಕಾರಣಿ ಅಲ್ಲ. ಕೋಲಾರ, ಬಾದಾಮಿಯವರು ಕರೀತಾ ಇದ್ದಾರೆ. ವರುಣಾದಲ್ಲೂ ಕರೀತಾ ಇದಾರೆ, ಅರ್ಜಿ ಹಾಕುವಾಗ ಹೈ ಕಮಾಂಡ್ ಗೆ ಬಿಟ್ಟಿದ್ದೇನೆ. ನಾನು ಉಳ್ಳಾಲ ನಿಲ್ಲೋದೆಲ್ಲ ಇಲ್ಲ, ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


