ಗೊಬ್ಬರ, ಡೀಸೆಲ್, ಪೆಟ್ರೋಲ್, ಸಿಮೆಂಟ್, ಗ್ಯಾಸ್, ಸೇರಿದಂತೆ ಎಲ್ಲ ಬೆಲೆಗಳ ಏರಿಕೆ ಆಗಿವೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರ ಬಡವರ, ರೈತರ ರಕ್ತ ಹೀರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ರಾಯಚೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೀವೆ ಅಂದ್ರು, ರೈತರ ಖರ್ಚು ಮಾಡುವುದು ದುಪ್ಪಟ್ಟು ಆಯ್ತು ಹೊರೆತು, ಆದಾಯ ಆಗಲಿಲ್ಲ. ರಾಹುಲ್ ಗಾಂಧಿ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ನಡುಕು ಶುರುವಾಗಿದೆ ಎಂದರು.
SC, ST ಮೀಸಲಾತಿ ವಿಚಾರ. ಪ್ರಿಯಾಂಕ ಖರ್ಗೆ ಅವರಿಗೆ ಒತ್ತಡ ಹಾಕಿ ನಾವು ಮಾಡಿಸಿದ್ದು. ಕಾಂಗ್ರೆಸ್ ವರದಿ ಕೊಟ್ಟಿ2 ವರ್ಷ 3 ತಿಂಗಳ ಆಗಿದೆ. ಈಗ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಭಾರತ್ ಜೋಡೋ ಪಾದಯಾತ್ರೆ ಮುಗಿದ ಮೇಲೆ ಮುಂದೆ ಎರಡು ಟೀಮ್ ಮಾಡಿ ಟ್ರ್ಯಾಕ್ಟರ್, ರಥಯಾತ್ರೆ ಅಂತ ಮಾಡುತ್ತಿದ್ದೇವೆ. ಎರಡು ಟೀಮ್ ಮಾಡಿ ರಥಯಾತ್ರೆ ಮಾಡುತ್ತೇವೆ. ಡಿಕೆಶಿ, ಸಿದ್ದರಾಮಯ್ಯ, ಸಿನಿಯರ್ ಲೀಡರ್ಸ್ ಎಲ್ಲರೂ ಇರುತ್ತಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ಬೆಲೆ ಏರಿಕೆಯಿಂದ ದೇಶ ತತ್ತರಿಸಿ ಹೋಗಿದೆ. ಬಿಜೆಪಿ ಸರ್ಕಾರ ಯುವಕರಿಗೆ ಕೆಲಸ ಕೊಡಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಮೋದಿಗೆ ಪತ್ರ ಬರೆದಿದ್ರೂ 40% ಕಮಿಷನ್ ಬಗ್ಗೆ ತನಿಖೆ ಮಾಡಿಸಿಲ್ಲ. ನನ್ನ ಕಾಲದಲ್ಲಿ ಕಮಿಷನ್ ಬಗೆಗಿನ 8 ಕೇಸ್ ಗಳನ್ನು CBI ಗೆ ರೇಫರ್ ಮಾಡಿದ್ದೆ. ಆದರೆ ಒಂದೇ ಒಂದು ಕೇಸ್ CBI ಗೆ ಬಿಜೆಪಿ ಸರ್ಕಾರ ಕೊಟ್ಟಿಲ್ಲ ಎಂದು ಸಿದ್ಧರಾಮಯ್ಯ ಗುಡುಗಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


