ಬೆಂಗಳೂರು: 50 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ ಸರ್ಕಾರ ನಡೆಸಿದೆ ಎಂಬುದು ಬಟಾಬಯಲಾಗಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದು ಸಚಿವ ಅಶೋಕ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಜನರಿಗೆ 500 ರೂ. ಕೊಟ್ಟು ಕರೆದುಕೊಂಡು ಬನ್ನಿ ಎಂಬ ವೀಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ತಲೆ ತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ. ನಮಗೆ ವೋಟ್ ಹಾಕಿ ಸದನಕ್ಕೆ ಕಳುಹಿಸುವವರಿಗೆ ಮಾಡಿದ ಅವಮಾನ. ಇವರು ಕಾರ್ಯಕ್ರಮಕ್ಕೆ 500 ರೂ. ಕೊಟ್ಟರೆ ವೋಟ್‌ಗೆ ಎಷ್ಟು ಹಣ ಕೊಡುತ್ತಾರೆ? ಸಾವಿರಾರು ಕೋಟಿ ರೂ. ಹಣ ಖರ್ಚು ಮಾಡಲು ಕಾಂಗ್ರೆಸ್ ಸಿದ್ದವಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುತ್ತಾರೆ ಎಂದು ಅಮಿತ್ ಶಾ ಹೇಳಿದ್ದರು. ಅದಕ್ಕೆ ಪಕ್ಕಾ ಸಾಕ್ಷಿ ಸಿಕ್ಕಿದೆ. ಇವರು ಅಧಿಕಾರಕ್ಕೆ ಬಂದರೆ ಜನರ ತೆರಿಗೆ ಹಣ ಲೂಟಿ ಹೊಡಿಯುತ್ತಾರೆ ಎಂದು ಕಿಡಿಕಾರಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


