ಸಿದ್ಧರಾಮಯ್ಯ ಎಲ್ಲಾ ಭರವಸೆ ಈಡೇರಿಸಿದ್ದಾರೆ ಎನ್ನುತ್ತಾರೆ ಆದರೆ ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು ಎಂದು ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಕೆ.ಎಸ್ ಈಶ್ವರಪ್ಪ, ಸಿದ‍್ಧರಾಮಯ್ಯ ಸ್ವಾರ್ಥಿ. ಪಕ್ಷಾಂತರ ಪ್ರವೀಣ. ಸಿದ್ಧರಾಮಯ್ಯ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸಾಯುವ ಹಂತದಲ್ಲಿದೆ. ಸಿದ್ಧರಾಮಯ್ಯಗೆ ಪಕ್ಷ ನಿಷ್ಟೆ ಇಲ್ಲ ಎಂದರು.
ಇದೇ ವೇಳೆ ಡಿ.ಕೆ ಶಿವಕುಮಾರ್ ವಿರುದ್ಧವೂ ಕಿಡಿಕಾರಿದ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಮನೆಯಲ್ಲಿ ಎಷ್ಟು ಹಣ ಇದೆ ಅಂತಾ ರೈಡ್ ಆಗುವವರೆಗೂ ಡಿಕೆ ಶಿವಕುಮಾರ್ ಗೆ ಗೊತ್ತಿರಲಿಲ್ಲ. ಅವರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ನೈತಿಕತೆ ಇಲ್ಲ. ಸುಳ್ಳು ಹೇಳುವ ಕಾಂಗ್ರೆಸ್ ಗೆ ಸೋಲು ಖಚಿತ ಎಂದು ವಾಗ್ದಾಳಿ ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


