ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ನನ್ನ ಅಪ್ಪನಾಣೆಗೂ ಸಿದ್ದರಾಮಣ್ಣ ಮುಂದೆ ಸಿಎಂ ಆಗಲ್ಲ ಎಂದು ಲೇವಡಿ ಮಾಡಿದ್ದಾರೆ.
ಮಾತನಾಡಿದ ನಳೀನ್ ಕುಮಾರ್ ಕಟೀಲ್, ಅವತ್ತು ಸೋನಿಯಾ ಗಾಂಧಿ ಕಾಲಿಡಿದು ಸಿಎಂ ಆಗಿದ್ರಿ. ದೇವೇಗೌಡರ ಹತ್ತಿರ ಬೆಳೆದು ಅವರನ್ನೇ ತುಳಿದ್ರಲ್ಲಾ ಸಿದ್ದರಾಮಣ್ಣ. ನನ್ನ ಅಪ್ಪನಾಣೆಗೂ ನೀವು ಮುಂದೆ ಸಿಎಂ ಆಗಲ್ಲ ಎಂದರು.
ಒಂದ್ ದಿನ ಸೋನಿಯಾ ಗಾಂಧಿ ನಿವಾಸದ ಮುಂದೆ ಕತ್ತೆ ಮಲಗಿತ್ತು. ಖರ್ಗೆ ಅಜಾದ್ ಸೇರಿ ಯಾರಿಂದಲೂ ಕತ್ತೆ ಓಡಿಸಲು ಆಗಲಿಲ್ಲ. ಕತ್ತೆಯನ್ನ ಓಡಿಸಿದ್ದು ಸಿದ್ದರಾಮಣ್ಣ. ಕಾಂಗ್ರೆಸ್ ಸೇರ್ತೀಯಾ ಅಂದಿದ್ರಂತೆ ಅದಕ್ಕೆ ಕತ್ತೆ ಓಡಿತು. ಕತ್ತೆಗೂ ಕಾಂಗ್ರೆಸ್ ಬೇಡವಾಗಿದೆ ಎಂದು ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


