ಕೊರಟಗೆರೆ : ರಾಜ್ಯದಲ್ಲಿ ಮತ್ತು ಸ್ಥಳೀಯವಾದ ಸಮಸ್ಯೆಗಳು ಬಗ್ಗೆ ಹಾಗೂ ಸಮಾಜದಲ್ಲಿ ಏನಾಗುತ್ತಿದೆ ಎಂದು ಪತ್ರಕರ್ತರ ಸುದ್ದಿಯಿಂದ ತಿಳಿದುಕೊಳ್ಳುವ ಸರ್ಕಾರ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಆಲಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದರು.
ಅವರು ಕೊರಟಗೆರೆ ತಾಲ್ಲೂಕಿನ ಸಸ್ಯ ಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ, ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪತ್ರಕರ್ತರಿಗೆ ಹಾಗೂ ಇತ್ತೀಚೆಗೆ ನಡೆದ ಜಿಲ್ಲಾ ಪತ್ರಕರ್ತ ಸಂಘದ ಚುನಾವಣೆಯಲ್ಲಿ ವಿಜೇತರಾದ ಪಧಾದಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಈ ಮೂರು ರಂಗಗಳಿಗೆ ವಿಶೇಷ ಸ್ಥಾನಮಾನ ನೀಡಿರುವ ಸರ್ಕಾರ ಹೆಸರಿಗಷ್ಟೇ ಸೀಮಿತವಾದ ನಾಲ್ಕನೇ ಅಂಗವಾದ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಬಹಳ ಸಮಸ್ಯೆಗಳಾಗುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಭದ್ರತೆ ಇಲ್ಲದಂತಾಗಿದೆ ಹಾಗೂ ಪತ್ರಕರ್ತರು ಜೀವನ ನಿರ್ವಹಣೆಯು ಕಷ್ಟಕರವಾಗಿದ್ದು, ಸರ್ಕಾರ ಪತ್ರಕರ್ತರ ಸಮಸ್ಯೆಗಳನ್ನು ಅರಿತು ಪತ್ರಕರ್ತರಿಗೆ ಆರೋಗ್ಯ ವಿಮೆಯೊಂದಿಗೆ ಮಾಸಿಕ ಗೌರವಧನ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ರಾಜಕೀಯ ಪ್ರತಿನಿಧಿಗಳು ಸರ್ಕಾರ ದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ, ಸರ್ಕಾರ ರಾಜ್ಯದ ಮೂರುವರೆ ಕೋಟಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಕರ್ನಾಟಕದಲ್ಲಿ ಎಲ್ಲಿಬೇಕಾದರು ಉಚಿತವಾಗಿ ಸಂಚರಿಸಬಹುದು ಆದರೆ ರಾಜ್ಯದಲ್ಲಿ ಕೇವಲ 8 ರಿಂದ 9 ಸಾವಿರ ಇರುವ ಪತ್ರಕರ್ತರಿಗೆ ನೂರೆಂಟು ಕಾನೂನುಗಳನ್ನು ಹಾಕಿ ಅದು ಕೇವಲ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಓಡಾಡಲು ಅದೇಶ ಮಾಡಿದೆ ಆದರೆ, ಇದರಿಂದ ಪತ್ರಕರ್ತರಿಗೆ ಯಾವುದೇ ಪ್ರಯೋಜನವು ಆಗುತ್ತಿಲ್ಲಾ ಸರ್ಕಾರ ಈಗಲಾದರೂ ಈ ತಾರತಮ್ಯ ತೆಗೆದು ಎಲ್ಲಾ ಪತ್ರಕರ್ತರನ್ನು ಒಂದೇ ಎಂದು ಭಾವಿಸಿ ಸರ್ಕಾರ ಮುಕ್ತವಾಗಿ ಸಹಾಯ ಹಸ್ತ ನೀಡಬೇಕಾಗಿದೆ ಎಂದು ತಿಳಿಸಿದ ಅವರು ಪ್ರತಿ ವರ್ಷ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಶ್ರೀ ಮಠದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದಿಸುತ್ತಿರುವುದು ಶ್ಲಾಘನೀಯವಾಗಿದ್ದು ಪತ್ರಕರ್ತರ ಪರವಾಗಿ ಶ್ರೀ ಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪತ್ರಕರ್ತ ಪದ್ಮರಾಜು ಮಾತನಾಡಿ, ಒಬ್ಬ ಪತ್ರಕರ್ತನಿಗೆ ತಮ್ಮ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಅರಿವಿದ್ದು ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಗಮನ ಹರಿಸುವಂತೆ ಕಾರ್ಯ ಮಾಡುತ್ತಿರುವ ಪತ್ರಕರ್ತರಿಗೆ ಸರ್ಕಾರ ಯಾವುದೇ ಸೌಲತ್ತುಗಳನ್ನು ನೀಡುತ್ತಿಲ್ಲಾ, ಮಾಧ್ಯಮಗಳು ಸುದ್ದಿ ಮಾಡಿದರೆ ಮಾಧ್ಯಮದವರು ಟಿ.ಆರ್.ಪಿ.ಗಾಗಿ ಸುದ್ದಿ ಮಾಡುತ್ತಿದ್ದಾರೆ ಎಂದು ದೂರುವರು ಮಾಧ್ಯಮಗಳು ಟಿ.ಆರ್.ಪಿ. ಯಿಂದಲೇ ಮಾಧ್ಯಮಗಳು ನಿಲ್ಲಬೇಕಾಗಿದೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಕಡಿಮೆಯಾಗಿದೆ, ಈ ರೀತಿಯಾದರೆ ಪತ್ರಿಕಾ ಮಾಧ್ಯಮ ನಡೆಯುವುದು ಹೇಗೆ ಸರ್ಕಾರ ಪತ್ರಕರ್ತರಿಗೂ ಜೀವನ ಇದೆ ಅವರಿಗೂ ಕುಟುಂಬ ಇದೆ ಎಂದು ಅರಿತು ಸರ್ಕಾರ ಪತ್ರಕರ್ತರಿಗೆ ಸವಲತ್ತು ನೀಡಬೇಕಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪತ್ರಕರ್ತರರಾದ ಯಶಸ್ಸ್ ಕೆ. ಪದ್ಮನಾಭ್, ಶಿವಾನಂದ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾತನಾಡಿದರೆ, ಇದೇ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ರಾಜ್ರೋತ್ಸವ ಪ್ರಶಸ್ತಿ ಪುರಸ್ಕೃತರಾ ಅಗ್ರಹಾರ ಸತೀಶ್, ಬಾಬುನಾಯ್ಕ, ಸಾಹಿತಿ ಹನುಮಂತು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ವಿಜೇತರಾದ ಕೆ.ವಿ.ಪುರುಷೋತ್ತಮ್, ಯಶಸ್ಸ್ ಕೆ.ಪದ್ಮನಾಭ್ ರವರನ್ನು ಶ್ರೀ ಗಳು ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎನ್.ಪದ್ಮನಾಭ್, ಶಿವಾನಂದ್, ಚಿದಂಬರ್, ರಾಘವೇಂದ್ರ, ಎನ್.ಮೂರ್ತಿ, ನಾಗರಾಜು, ನವೀನ್ ಕುಮಾರ್, ಹರೀಶ್ ಬಾಬು, ಮಂಜುನಾಥ್, ಮಂಜುಸ್ವಾಮಿ ಎಂ ಎನ್, ವಿಜಯಶಂಕರ್,ಲಕ್ಷ್ಮೀಶ, ಲಕ್ಷ್ಮಿಕಾಂತ,ಕಾಮಣ್ಣ,ನಾಗೇಂದ್ರ, ಮುತ್ತುರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


