nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿರಾ: ಕಾರ್ಯಕರ್ತರೇ ಶಾಶ್ವತ, ಬಿಜೆಪಿ ಅಧಿಕಾರದಲ್ಲಿ ಪುನಃ ಹಿಂದಿ ಜಾರಿ: ಬಿಜೆಪಿ 46ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ

    April 7, 2026

    ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ

    April 7, 2026

    ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ

    April 7, 2026
    Facebook Twitter Instagram
    ಟ್ರೆಂಡಿಂಗ್
    • ಶಿರಾ: ಕಾರ್ಯಕರ್ತರೇ ಶಾಶ್ವತ, ಬಿಜೆಪಿ ಅಧಿಕಾರದಲ್ಲಿ ಪುನಃ ಹಿಂದಿ ಜಾರಿ: ಬಿಜೆಪಿ 46ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ
    • ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ
    • ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ
    • ಮಧುಗಿರಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ರೈತ ಸಂಘದ ತೀವ್ರ ವಿರೋಧ; ಏಪ್ರಿಲ್ 13ಕ್ಕೆ ಪ್ರತಿಭಟನೆ
    • ವೈ.ಎನ್.ಹೊಸಕೋಟೆ: ಶಾಲಾ ಆವರಣದಲ್ಲಿ ಮದ್ಯದ ಬಾಟಲಿಗಳ ರಾಶಿ: ಕುಡುಕರ ಅಡ್ಡೆಯಾದ ವಿದ್ಯಾಮಂದಿರ
    • ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ
    • ತಿಪಟೂರು: ಕೃಷ್ಣ ಅವರಿಗೆ ಕೆಯುಡಬ್ಲೂಜೆ ರಾಜ್ಯ ಮಟ್ಟದ ಟಿ.ಕೆ.ಮಲಗೊಂಡ ದತ್ತಿ ಪ್ರಶಸ್ತಿ
    • ಚಿತ್ರೀಕರಣ ಪೂರೈಸಿದ ‘ಶಿಲ್ಪಾ ಶ್ರೀನಿವಾಸ್’: ಫ್ಯಾಮಿಲಿ ಸ್ಟಾರ್ ಅಭಿಜಿತ್ ನೃತ್ಯದೊಂದಿಗೆ ಕ್ಲೈಮ್ಯಾಕ್ಸ್ ಪೂರ್ಣ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರ ಜಾತ್ರೆ:  ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ
    ತುಮಕೂರು February 16, 2026

    ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರ ಜಾತ್ರೆ:  ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

    By adminFebruary 16, 2026No Comments2 Mins Read

    ತುಮಕೂರು: ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರ ಜಾತ್ರೆ ಪ್ರಯುಕ್ತ ಮಠದಲ್ಲಿ ನಡೆದಿರುವ ಮೂರು ದಿನಗಳ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಷ್ಠಿತ ತಂಡಗಳು ಪಾಲ್ಗೊಂಡವು.

    ಸಿದ್ಧಗಂಗಾ ಜಾತ್ರೆಯ ವಿವಿಧ ಆಚರಣೆ, ಕಾರ್ಯಕ್ರಮಗಳ ಜೊತೆಗೆ ಕಬಡ್ಡಿ ಜಾತ್ರೆಯೂ ಮಠಕ್ಕೆ ಬರುವ ಸಹಸ್ರಾರು ಭಕ್ತರನ್ನು ಆಕರ್ಷಿಸಿ ಸಂಭ್ರಮ ಹೆಚ್ಚಿಸಿದೆ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಕಾರದಲ್ಲಿ ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಈ ಪಂದ್ಯಾವಳಿ ಆಯೋಜಿಸಿದೆ. ಮೊದಲ ದಿನ ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಕಬಡ್ಡಿ ಜಾತ್ರೆಗೆ ಚಾಲನೆ ನೀಡಿ ಶುಭ ಕೋರಿದರು.


    Provided by
    Provided by

    20 ಪುರುಷ ಹಾಗೂ 4 ಮಹಿಳಾ ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಸೆಣಸಾಟ ನಡೆಸಲಿವೆ. ಅಂತರಾಷ್ಟ್ರೀಯ ಗುಣಮಟ್ಟದ ಅಂಕಣದಲ್ಲಿ ನಡೆದಿರುವ ಕಬಡ್ಡಿ ಪಂದ್ಯಾವಳಿಯನ್ನು ಪ್ರತಿದಿನ ಸಾವಿರಾರು ಕ್ರೀಡಾಭಿಮಾನಿಗಳು ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ಪಂದ್ಯಗಳ ರೋಚಕತೆಯನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಅನುಕೂಲಕ್ಕಾಗಿ ವ್ಯವಸ್ಥಿತ ಗ್ಯಾಲರಿ ಸಿದ್ಧಪಡಿಸಲಾಗಿದೆ.

    ಎರಡನೇ ದಿನವಾದ ಶನಿವಾರ ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಹಿರಿಯ ಕಬಡ್ಡಿ ಆಟಗಾರರಾದ ಮುನಿರಾಜು ಹಾಗೂ ನಟರಾಜು ಅವರಿಗೆ ಸಿದ್ಧಗಂಗಾ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಪತ್ರಕರ್ತ ಡಾ.ಎಸ್.ನಾಗಣ್ಣ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಕಬಡ್ಡಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ನಮ್ಮ ಹಿರಿಮೆ. ಹಳ್ಳಿ ಹಳ್ಳಿಗಳಲ್ಲೂ ಕಬಡ್ಡಿ ಪ್ರತಿಭೆಗಳಿವೆ. ಅಂತಹವರನ್ನು ಗುರುತಿಸಿ ಬೆಳಕಿಗೆ ತರಲು ಹಾಗೂ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಇಂತಹ ಪಂದ್ಯಾವಳಿಗಳು ವೇದಿಕೆಯಾಗಲಿವೆ ಎಂದು ಹೇಳಿದರು.

    ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಹೆಚ್.ಎನ್.ದೀಪಕ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ಆರ್.ರವೀಂದ್ರ, ಜಂಟಿ ಕಾರ್ಯದರ್ಶಿ ಮುನಿರಾಜು, ನಿರ್ದೇಶಕ ರಮೇಶ್, ಹಲವಾರು ಮಂದಿ ಹಿರಿಯ ಕಬಡ್ಡಿ ಆಟಗಾರರು, ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಶಂಕರ್, ವಿಜಯಸೇನೆ ರಾಜ್ಯ ಕಾರ್ಯದರ್ಶಿ ರಂಜನ್, ಚಕ್ರವರ್ತಿ ಪ್ರಕಾಶ್, ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಆರ್. ಎಸ್.ವಿರೂಪಾಕ್ಷಯ್ಯ, ಉಪಾಧ್ಯಕ್ಷರಾದ ಕೆ.ಆರ್.ಸತೀಶ್, ಆರ್.ಗುರುಪ್ರಸಾದ್, ಆರ್.ಎಸ್. ಸೋಮಶೇಖರ್, ಬಿ.ಸಿ.ಮಲ್ಲಿಕಾರ್ಜುನ್, ಆರ್.ಹೆಚ್.ಶಿವಕುಮಾರ್, ಹೆಚ್.ಜಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ಉಮಾಶಂಕರ್, ಕಾರ್ಯದರ್ಶಿ ಆರ್.ಎಂ.ಸಿದ್ದರಾಜು, ಖಜಾಂಚಿ ಎ.ಜಿ.ಹರೀಶ್ ಹಾಗೂ ನಿರ್ದೇಶಕರು ಅಲ್ಲದೆ ವಿವಿಧ ಕ್ರೀಡಾ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ

    April 7, 2026

    ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ

    April 7, 2026

    ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್‌

    April 6, 2026

    Leave A Reply Cancel Reply

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸಿರಾ

    ಶಿರಾ: ಕಾರ್ಯಕರ್ತರೇ ಶಾಶ್ವತ, ಬಿಜೆಪಿ ಅಧಿಕಾರದಲ್ಲಿ ಪುನಃ ಹಿಂದಿ ಜಾರಿ: ಬಿಜೆಪಿ 46ನೇ ವರ್ಷದ ಸಂಸ್ಥಾಪನಾ ದಿನ ಆಚರಣೆ

    April 7, 2026

    ಶಿರಾ/ತುಮಕೂರು: ದೇಶದಲ್ಲಿ ಸುಮಾರು 15 ಕೋಟಿ ಬಿಜೆಪಿ ಕಾರ್ಯಕರ್ತರು ಇದ್ದು, ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟುವುದು ನಮ್ಮ ಮೂಲ…

    ಬಿಜೆಪಿ ಇತಿಹಾಸ, ಸಿದ್ಧಾಂತ ಜನರಿಗೆ ತಿಳಿಸಿ: ಕಾರ್ಯಕರ್ತರಿಗೆ ಶಾಸಕ ಜ್ಯೋತಿ ಗಣೇಶ್ ಕರೆ

    April 7, 2026

    ಹೊನ್ನುಡಿಕೆಯಲ್ಲಿ ನರ ಮತ್ತು ಮನೋರೋಗ ತಪಾಸಣಾ ಶಿಬಿರ: ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ ಎಂದ ಮಾಜಿ ಶಾಸಕ ಎಚ್.ನಿಂಗಪ್ಪ

    April 7, 2026

    ಮಧುಗಿರಿ: ಸ್ಮಾರ್ಟ್ ಮೀಟರ್ ಅಳವಡಿಕೆಗೆ ರೈತ ಸಂಘದ ತೀವ್ರ ವಿರೋಧ; ಏಪ್ರಿಲ್ 13ಕ್ಕೆ ಪ್ರತಿಭಟನೆ

    April 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.