ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಗೇಮಿಂಗ್ ಉದ್ಯಮವು ಗಮನಾರ್ಹವಾಗಿ ಬೆಳೆದಿದ್ದು, ಅನೇಕ ಯುವಕರು ಗೇಮಿಂಗ್ ವೃತ್ತಿಯನ್ನಾಗಿ ಆರಿಸಿಕೊಳ್ಳುತ್ತಿದ್ದಾರೆ.
ಎಚ್ ಪಿ ಗೇಮಿಂಗ್ ಸ್ಟಡಿ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ, ಈ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದವರಲ್ಲಿ ಅರ್ಧದಷ್ಟು ಜನರು ವಾರ್ಷಿಕವಾಗಿ 6 ಲಕ್ಷದಿಂದ 12 ಲಕ್ಷ ರೂಪಾಯಿಗಳವರೆಗೆ ಗಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
3500 ಜನರನ್ನು (75 ಪ್ರತಿಶತ ಪುರುಷರು ಮತ್ತು 25 ಪ್ರತಿಶತ ಮಹಿಳೆಯರು) ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.


