ಗುವಾಹಟಿ : ಸಿಕ್ಕಿಂನ ನಾಥು ಲಾ ಪರ್ವತ ಪಾಸ್’ನಲ್ಲಿ ಇಂದು ಮಂಗಳವಾರ ಮಧ್ಯಾಹ್ನ 12:20 ರ ಸುಮಾರಿಗೆ ಭಾರಿ ಹಿಮಪಾತ ಸಂಭವಿಸಿದ್ದು, ಅದರಲ್ಲಿ ನಾಲ್ವರು ಪುರುಷರು,ಓರ್ವ ಮಹಿಳೆ, ಒಂದು ಮಗು ಸೇರಿದಂತೆ ಒಟ್ಟು 6 ಪ್ರವಾಸಿಗರು ಮೃತ ಪಟ್ಟಿದ್ದಾರೆ ಇನ್ನು ಹಲವಾರು ಪ್ರವಾಸಿಗರು ಹಿಮದ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ .
ಆದರೆ ಈ ಹಿಮಪಾತ ಸಂಭವಿಸಿದಾಗ 150ಕ್ಕೂ ಹೆಚ್ಚು ಪ್ರವಾಸಿಗರು ಈ ಪ್ರದೇಶದಲ್ಲಿದ್ದರು ಎಂದು ವರದಿಯಾಗಿದೆ. ಇನ್ನು ಹಿಮದಡಿ ಸಿಲುಕಿದ್ದ 22 ಪ್ರವಾಸಿಗರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಇನ್ನು ಹೆಚ್ಚು ಮಂದಿ ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಅದ್ದರಿಂದ ಇಂದು ಸಿಕ್ಕಿಂನ ನಾಥು ಲಾ ಪರ್ವತ ಪಾಸ್’ನಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನುಆರಂಭಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


