ಗ್ಯಾಂಗ್ ಟಾಕ್: ಜೂನ್ 1 ಉತ್ತರ ಸಿಕ್ಕಿಂನ ಚಾಟೆನ್ನ ಸೇನಾ ಶಿಬಿರದಲ್ಲಿ ಭೂಕುಸಿತ ಸಂಭವಿಸಿದ ನಂತರ ನಾಪತ್ತೆಯಾಗಿದ್ದ ಆರು ಸೇನಾ ಸಿಬ್ಬಂದಿಯ ಪೈಕಿ ಒಬ್ಬ ಸಿಬ್ಬಂದಿಯ ಮೃತದೇಹವನ್ನು ಸೋಮವಾರ ಮಂಗನ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುತಾತ್ಮ ಯೋಧನನ್ನು ಸೈನುದ್ಧೀನ್ ಪಿಕೆ ಎಂದು ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾಣೆಯಾದ ಇತರ ಸೇನಾ ಸಿಬ್ಬಂದಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಂಗನ್ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಸೋನಮ್ ಡೆಟ್ಚು ಭುಟಿಯಾ ಅವರು ತಿಳಿಸಿದ್ದಾರೆ.
“ಜೂನ್ 1 ರಂದು ಚಾಟೆನ್ ನಲ್ಲಿರುವ ಸೇನಾ ಶಿಬಿರದಲ್ಲಿ ಸಂಭವಿಸಿದ ಭೂಕುಸಿತದ ನಂತರ ಕಾಣೆಯಾದ ಆರು ಸಿಬ್ಬಂದಿಗಳಲ್ಲಿ ಒಬ್ಬರಾದ ಸೇನಾ ಸಿಬ್ಬಂದಿ ಸೈನುಧೀನ್ ಪಿಕೆ ಅವರ ಮೃತದೇಹವನ್ನು ರಕ್ಷಣಾ ತಂಡಗಳು ವಶಪಡಿಸಿಕೊಂಡಿವೆ” ಎಂದು ಎಸ್ ಪಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW