ಕರ್ನಾಟಕ ಕಲಾವಿದರ ಸಂಘದ ಸದಸ್ಯ, ಗಾಯಕ, ಸಂಗೀತ ಸಂಯೋಜಕ ಮನೋಜ್ ವಸಿಷ್ಠ ಅವರು ನಿಧನರಾಗಿದ್ದಾರೆ. ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಮನೋಜ್ ವಸಿಷ್ಠ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಕಲಾವಿದರ ಸಂಘದ ಸದಸ್ಯರೂ ಆಗಿದ್ದ ಮನೋಜ್ ವಸಿಷ್ಠ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಪಾರ್ಥೀವ ಶರೀರವನ್ನು ಜಯನಗರದ ಆಮಿಟಿ ದೇವಸ್ಥಾನ ಬೇ ಅಪಾರ್ಟೆಂಟ್ ನಲ್ಲಿ ಇಡಲಾಗಿದೆ.


