ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಮಾಡಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ 15 ನೇ ಹಣಕಾಸು ಯೋಜನೆಯಲ್ಲಿ ಅನುಮೋದನೆ ಮಾಡಿದ್ದರು.
ಗ್ರಾಮೀಣ ಭಾಗದ ಅಭಿವೃದ್ಧಿಗೆ ಮತ್ತು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಶೀಘ್ರವೇ ಕಟ್ಟಡ ಕಾಮಗಾರಿ ಆರಂಭ ಮಾಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮಾರ್ಗದರ್ಶನ ನೀಡಿದ್ದರು.
ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸದರಿ ಕಾಮಗಾರಿ ನಿರ್ವಹಿಸಲು ಗುತ್ತಿಗೆ ಕರಾರಿನಂತೆ ಟೆಂಡರ್ ಮುಖಾಂತರ ಗುತ್ತಿಗೆದಾರರಾದ ಶ್ರೀನಿವಾಸ್ ಮೂರ್ತಿಗೆ ಕಾರ್ಯದೇಶ ಸಹ ನೀಡಲಾಗಿದೆ.
ಆರೋಗ್ಯ ಇಲಾಖೆಯಿಂದ ಅನುಮೋದನೆಯಾಗಿರುವ ನಕ್ಷೆಯಂತೆ ಕಟ್ಟಡವನ್ನು ನಿರ್ಮಿಸಲು ಕನಿಷ್ಠ 2400.00 ಚ.ಅಡಿಗಳಷ್ಟು ನಿವೇಶನ ಅವಶ್ಯಕತೆ ಇದ್ದ ಕಾರಣ ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ರವರ ಆದೇಶದಂತೆ ಸದರಿ ಗ್ರಾಮದ ಗ್ರಾಮಠಾಣಾದಲ್ಲಿ ಗ್ರಾಮಸ್ಥರ ಮತ್ತು ಸಾರ್ವಜನಿಕರ ಒಪ್ಪಿಗೆಯಂತೆ ಗ್ರಾಮದ ಅಭಿವೃದ್ಧಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಮನವಿಯಂತೆ, ಸುಮಾರು 2400.00 ಚ.ಅಡಿಗಳಷ್ಟು (60×40) ವಿಸ್ತೀರ್ಣ ಹೊಂದಿರುವ ನಿವೇಶನವನ್ನು ಅಳತೆ ಮಾಡಿ, ಗಡಿ ಗುರುತಿಸಿ ಗ್ರಾಮ ಪಂಚಾಯತಿಯಲ್ಲಿ ಖಾತೆ ಮಾಡಿ ಸಂಬಂಧಪಟ್ಟ ಇಲಾಖೆಗೆ ನಿವೇಶನವನ್ನು ಹಸ್ತಾಂತರ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಓ ರಘು ನಂದನ್, ಮುಖಂಡರಾದ ಅರವಿಂದ್, ಹುಲಿರಾಮಯ್ಯ, ಕುಮಾರ್ ಮತ್ತು ನಿವೃತ್ತ ಶಿಕಕ್ಷರಾದ ರಾಮಯ್ಯ ಮಾತನಾಡಿದರು.
ನಿವೇಶನವನ್ನು ಅಳತೆ ಮಾಡಿ, ಗಡಿ ಗುರುತಿಸಿದ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್, ಪತ್ರಕರ್ತರಾದ ಮಂಜುಸ್ವಾಮಿ ಎಂ ಎನ್, ಮುಖಂಡರಾದ ಮುದ್ದರಂಗಪ್ಪ, ರಂಗಪ್ಪ, ರಮೇಶ್, ಕೃಷ್ಣಪ್ಪ, ದೇವರಾಜ್, ಮಲ್ಲಪ್ಪ, ಜಯರಾಂ, ನಾರಾಯಣಪ್ಪ, ಉಮೇಶ್, ನರಸಿಂಹರಾಜು, ಕಾಮಣ್ಣ, ಮಂಜುನಾಥ್ ಮತ್ತು ಗ್ರಾ. ಪಂ. ಬಿಲ್ ಕಲೆಕ್ಟರ್ ಪ್ರಕಾಶ್ ಸೇರಿದಂತೆ ಸಿಬ್ಬಂದಿಗಳು, ಗ್ರಾಮಸ್ಥರು, ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


