ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳ್ ನ ಕುವೆಂಪು ನಗರದ.ಎಸ್.ಕೆ.ಐ.ಹಿರಿಯ ಪ್ರಾಥಮಿಕ(ಆಂಗ್ಲ ಮಾಧ್ಯಮ) ಶಾಲೆಯಲ್ಲಿ ‘ಹೊಂಗನಸು’ ಎಂಬ ಶೀರ್ಷಿಕೆ ಅಡಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.’
ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನಾಗೇಶ್ವರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಅಚ್ಚುವ ಮೂಲಕ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್, ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ, ಕನಸು ಕಾಣಬೇಕು, ಕನಸ್ಸು ಕಂಡರೆ ಮಾತ್ರ ನನಸಾಗವುದು. ಮಕ್ಕಳ ಪ್ರತಿಭೆ ಕಾಣಬೇಕೆಂದರೆ ಇಂತಹ ಸುಂದರ ಸಂಜೆಯಂತಹ ಸಮಾರಂಭಗಳು ನಡೆಯಬೇಕೆಂದರು.
ಶಾಲೆಯ ಮುಖ್ಯ ಶಿಕ್ಷಕಿಯಾದ ಆಯಿಶಾ ಪಾತಿಮಾ ಆವರು ಶಾಲೆಯ ವಾರ್ಷಿಕ ವರದಿ ಓದಿದರು. ಈ ಸಮಯದಲ್ಲಿ ಐದನೇಯ ತರಗತಿಯಲ್ಲಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತ್ತು.
ಈ ಸಮಯದಲ್ಲಿ ಪುಟ್ಟಾಣಿ ಮಕ್ಕಳಿಂದ ನಮ್ಮ ನಾಡಿನ ಹಿರಿಮೆಯಾದ ದೇಶ ಭಕ್ತಿ ಗೀತೆ, ರೈತ ಗೀತೆ, ಭಕ್ತಿ ಗೀತೆ, ನಾಡಗೀತೆ ಹಾಗೂ ಚಲನಚಿತ್ರಗಳಿಗೆ ಬಣ್ಣ ಬಣ್ಣದ ಉಡುಪುಗಳನ್ನು ತೊಟ್ಟು ಮಕ್ಕಳು ಕುಣಿದ್ದು ಕುಪ್ಪಳಿಸಿ ಕಾರ್ಯಕ್ರಮವನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅಕ್ಕಿಹೆಬ್ಬಾಳು ಗ್ರಾಮದ ಮುಖಂಡರುಗಳು ಹಾಗೂ ಪೋಷಕರು ಮತ್ತು ಸುತ್ತ ಮುತ್ತ ಹಳ್ಳಿಯ ಸಾರ್ವಜನಿಕರನ್ನು ಶಾಲೆಯ ಸಿಬ್ಬಂದಿ ವರ್ಗ ಸ್ವಾಗತ ಕೋರಿದ್ದರು.
ವರದಿ: ಮಂಜು ಶ್ರವಣೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy