ಬೆಳಗಾವಿ: ಬಾಳೇಕುಂದ್ರಿ ಕೆ ಎಚ್ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಮತ್ತು ನೂತನ ಸ್ಮಾರ್ಟ್ ಕ್ಲಾಸ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಉದ್ಘಾಟಿಸಿದರು.
ಕಾಲ ಬದಲಾದಂತೆ ತಂತ್ರಜ್ಞಾನಗಳು ಬದಲಾಗುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯಂತ ವೇಗವಾಗಿ ಬದಲಾಗುವ ತಂತ್ರಜ್ಞಾನದೊಂದಿಗೆ ಮಕ್ಕಳು ಓಡಲೇಬೇಕಾಗಿದೆ. ಹಾಗಾಗಿ ಸ್ಮಾರ್ಟ್ ಕ್ಲಾಸ್ ಗಳು ಅನಿವಾರ್ಯವಾಗಿವೆ. ವಿದ್ಯಾರ್ಥಿಗಳು ಸಮರ್ಪಕ ಬಳಕೆಯ. ಮೂಲಕ ಇದರ ಪ್ರಯ.ೋಜನ ಪಡೆಯಬೇಕು ಎಂದು ಚನ್ನರಾಜ ಕರೆ ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ನಿಲೇಶ್ ಚಂದಗಡ್ಕರ್, ಶಹಬಾಜ್ ಶೇಖ್, ಜೈನೂಲ್ ಕುಡಚಿ, ಕುತಬುದ್ದಿನ ಅತ್ತಾರ ಹಾಗೂ ಶಾಲಾ ಸಿಬ್ಬಂದಿ ವರ್ಗದವರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


