ಬೆಂಗಳೂರು: ಸ್ನೇಹಿತನೇ ನನ್ನ ಪತ್ನಿಯ ತಲೆ ಕೆಡಿಸಿ ಲವ್ ಜಿಹಾದ್ ಮಾಡಿದ್ದಾನೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿರುವ ವಿಚಿತ್ರ ಘಟನೆ ನಡೆದಿದೆ.
ನಗರದ ಖಾಸಗಿ ಕಾರ್ಖನೆಯೊಂದರಲ್ಲಿ ಕಾರ್ಮಿಕನಾಗಿರುವ ಅಜಿತ್ ತನ್ನ ಪತ್ನಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ಇವರಿಬ್ಬರೂ ಮದುವೆಯಾಗಿದ್ದರು. ತನ್ನ ಹಾಗೂ ಹೆಂಡತಿ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಮಧ್ಯ ಪ್ರವೇಶಿಸಿದ್ದ ಕುಟುಂಬದ ಸ್ನೇಹಿತ ಸಲ್ಮಾನ್ ರಹಸ್ಯವಾಗಿ ಆಕೆಯ ತಲೆಕೆಡಿಸಿದ್ದು, ಆಕೆಯ ಜೊತೆಗೆ ಸಂಬಂಧ ಬೆಳೆಸಿದ್ದಾನೆ ಎಂದು ಅಜಿತ್ ಆರೋಪಿಸಿದ್ದಾನೆ.
ಸಲ್ಮಾನ್ ಹಾಗೂ ಪತ್ನಿಯ ಖಾಸಗಿ ಫೋಟೋಗಳು ಸಿಕ್ಕ ನಂತರ ಅವರಿಬ್ಬರ ನಡುವಿನ ಅಕ್ರಮ ಸಂಬಂಧ ದೃಢಪಟ್ಟಿದ್ದು, ಹೊಸಗುಡ್ಜದಹಳ್ಳಿಯ ನಿವಾಸಿ ಅಜಿತ್ ಶಾಕ್ ಆಗಿದ್ದಾರೆ. ಪೋಷಕರ ತೀವ್ರ ವಿರೋಧದ ನಡುವೆಯೇ ಆಗಸ್ಟ್ 2020 ರಲ್ಲಿ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರೂ ವಿವಾಹವಾಗಿದ್ದರು. ಸಲ್ಮಾನ್ ಬಾಲ್ಯದಿಂದಲೂ ಅಜಿತ್ ಗೆ ಪರಿಚಿತನಾಗಿದ್ದು, ಇಬ್ಬರೂ ಸ್ನೇಹಿತರಾಗಿದ್ದರು. ಅಲ್ಲದೇ ಕಾರ್ಖಾನೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ತಮಿಳುನಾಡಿಗೆ ಹೋಗಿದ್ದಾಗ ತನ್ನ ಮೊಬೈಲ್ ಬಳಸಿ ಪತ್ನಿಗೆ ಕರೆ ಮಾಡುವ ಮೂಲಕ ಸಲ್ಮಾನ್ ಆಕೆಗೆ ಹತ್ತಿರವಾಗಿದ್ದಾನೆ. ತದನಂತರ ತಂಗಿ ಅಂತಾ ಹೇಳಿ ಮನೆಗೆ ಬರುತ್ತಿದ್ದು, ಸಲ್ಮಾನ್ ಆಗಾಗ್ಗೆ ಉಂಟಾಗುತ್ತಿದ್ದ ಜಗಳವನ್ನು ಬಗೆಹರಿಸುತ್ತಿದ್ದ ಎಂದು ಅಜಿತ್ ಹೇಳಿದ್ದಾರೆ.
ಏಪ್ರಿಲ್ ನಲ್ಲಿ ಅಜಿತ್ ನ ಹೆಂಡತಿ ತನ್ನ ತವರು ಮನೆಗೆ ತೆರಳಿದ್ದು, ವಾಪಸ್ ಬರಲು ನಿರಾಕರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಅಜಿತ್ ತನ್ನ ಹೆಂಡತಿಗೆ ಹೊಡೆದಿದ್ದಾನೆ. ಈ ಘಟನೆಯ ನಂತರ ಸಲ್ಮಾನ್ ಜೊತೆ ಪತ್ನಿ ರೋಮ್ಯಾನ್ಸ್ ಮಾಡುತ್ತಿರುವ ಫೋಟೋಗಳು ಸಿಕ್ಕಿವೆ. ಈ ಪೋಟೋಗಳ ಬಗ್ಗೆ ಪ್ರಶ್ನಿಸಿದಾಗ ವಿಚ್ಚೇದನ ನೀಡುವಂತೆ ಪತ್ನಿ ಒತ್ತಾಯಿಸಿದ್ದಾಳೆ. ತಾನು ಸಲ್ಮಾನ್ ಜೊತೆ ಇರಲು ಬಯಸುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾಳೆ. ತನ್ನ ಹೆಂಡತಿ ಲವ್ ಜಿಹಾದಿಗೆ ಬಲಿಯಾಗಿದ್ದಾಳೆ ಎಂದು ಅಜಿತ್ ಆರೋಪಿದ್ದಾನೆ ಎಂದು ವರದಿಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


