ತುಮಕೂರು: ತುಮಕೂರು ನಗರದ ಹಿರಿಯ ಸಮಾಜ ಸೇವಕರಾದ ಪಿ.ಎಸ್.ಚಂದ್ರಮೋಹನ್(65) ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರು ಸದಾ ಶಿಕ್ಷಣ ಪ್ರೇಮಿಯಾಗಿದ್ದರು, ಬಡವರು, ದೀನರು, ಮಕ್ಕಳ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದ್ದರು.
ಪಿ.ಎಸ್.ಚಂದ್ರಮೊಹನ್ ರವರ ತಂದೆ ದಿವಂಗತ ಕೆ.ಸುಬ್ಬರಾಯರವರು ನಿವೃತ್ತ ಎಇಓ ಆಗಿದ್ದು, ತಾಯಿ ದಿವಂಗತ ಸರೋಜಮ್ಮನವರು ತಂದೆ—ತಾಯಿ ಇಬ್ಬರೂ ಸಹ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತುರುವೇಕೆರೆ, ಗುಬ್ಬಿಯಲ್ಲಿ ಪಡೆದು ಪಿಯುಸಿಯನ್ನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪಡೆದು ಬಿಇ(ಸಿವಿಲ್) ಪದವಿಯನ್ನು ಶ್ರೀ ಸಿದ್ಧಗಂಗಾ ಇನ್ಸಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಡೆದು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆಗೆ ಸೇರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ 36 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಅವರಿಗೆಇಬ್ಬರು ಮಕ್ಕಳಿದ್ದು ಹಿರಿಯ ಮಗ ಟಿ.ಸಿ.ಚೇತನ್ ರವರು ಬಿ.ಇ.(ಕಂಪ್ಯೂಟರ್ ಸೈನ್ಸ್) ಪದವೀಧರರಾಗಿದ್ದು ಕೆನಡಾದೇಶದಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದಾರೆ.
ಮಗಳು ಸಹ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಹೆಂಡತಿ, ಮಕ್ಕಳು, ಅಪಾರ ಸ್ನೇಹಿತರು, ಅಕ್ಕ, ತಮ್ಮ, ಬಂಧುವರ್ಗದವರನ್ನು ಬಿಟ್ಟು ಅಗಲಿದ್ದಾರೆ. ಶ್ರೀಯುತರ ನಿಧನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಡಾ.ಎಸ್.ರಫೀಕ್ಅಹಮದ್, ತಿಪಟೂರು ಜೆಡಿಎಸ್ ಮುಖಂಡ ಶಾಂತಕುಮಾರ್, ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅಹಮದ್, ಮುರಳೀಧರ ಹಾಲಪ್ಪ, ಹಿರಿಯ ವಕೀಲರು, ನ್ಯಾಯಾಧೀಶರು, ಜಯನಗರಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರುತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಗೆ ಅವರ ಅಂತಿಮ ವಿಧಿವಿಧಾನಗಳು ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx