ಚಿಕ್ಕಮಗಳೂರು: ಕುಡಿತದ ಮತ್ತಿನಲ್ಲಿ ಮಗನೇ ತಂದೆಯನ್ನು ಚಾಕುವಿನಿಂದ ಚುಚ್ಚು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಮಂಜುನಾಥ್ (51) ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ ಪುತ್ರ ರಂಜನ್ (21) ಕೊಲೆ ಗೈದ ಆರೋಪಿಯಾಗಿದ್ದಾನೆ.
ಆರೋಪಿ ರಂಜನ್ ಆ.16ರ ಸಂಜೆ ಆಲ್ದೂರಿಗೆ ಹೋಗಿ ಸಂತೆ ಮುಗಿಸಿಕೊಂಡು, ಮದ್ಯಪಾನ ಮಾಡಿಕೊಂಡು ಮನೆ ಬಂದಿದ್ದ. ಈ ವೇಳೆ ತಂದೆ ತಾಯಿಯ ನಡುವೆ ಜಗಳ ನಡೆಯುತ್ತಿತ್ತು. ಜಗಳ ಬಿಡಿಸಲು ಹೋದ ರಂಜನ್ ತಂದೆಗೆ ಹಿಂದಿನಿಂದ ಚಾಕುವಿನಿಂದ ಇರಿದಿದ್ದಾನೆ.
ಕೊನೆಗೆ ಜಗಳ ಬಿಡಿಸಿದ ತಾಯಿ ಚಾಕುವಿನಿಂದ ಚುಚ್ಚಿದ ಗಾಯಕ್ಕೆ ಅರಿಶಿಣ ಪುಡಿ ಹಚ್ಚಿ ಮಲಗಿಸಿದ್ದರು. ರಾತ್ರಿ ತೀವ್ರ ರಕ್ತಸ್ರಾವದಿಂದ ಮಂಜುನಾಥ್ ಮೃತಪಟ್ಟಿದ್ದರು.
ಬೆಳಗ್ಗೆ ತಂದೆ ಸಾವನ್ನಪ್ಪಿರುವ ವಿಚಾರ ತಿಳಿದ ಪುತ್ರ ಜಗಳ ಬಿಡಿಸುವ ವೇಳೆ ಚಾಕು ತಾಗಿ ಗಾಯವಾಗಿದೆ ಎಂದು ಕೆಲವರ ಬಳಿ ಹೇಳಿದರೆ, ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಅಂತ ಇನ್ನು ಕೆಲವರ ಬಳಿ ಹೇಳಿಕೊಂಡಿದ್ದ. ಪ್ರಕರಣದ ಮಾಹಿತಿ ಪಡೆದ ಆಲ್ದೂರು ಪೊಲೀಸರು ಪುತ್ರನನ್ನು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC