ಮೈಸೂರು: ತಂದೆಯನ್ನು ಹತ್ಯೆ ಮಾಡಿದ ಮಗನೊಬ್ಬ ಅಪಘಾತದ ಕಥೆ ಕಟ್ಟಿ ಸಿಕ್ಕಿಬಿದ್ದ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದ್ದು, ಘಟನೆಯ ಸತ್ಯಾಂಶ ಬಯಲಾದ ಬೆನ್ನಲ್ಲೇ ಆರೋಪಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಅಣ್ಣಪ್ಪ ಎಂಬವರು ಹತ್ಯೆಗೀಡಾದವರಾಗಿದ್ದು, ಇವರ ಪುತ್ರ ಪಿರಿಯಾಪಟ್ಟಣದ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯ ಪಾಂಡು ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.
ಪಿರಿಯಾಪಟ್ಟಣದ ಬೈಲುಕುಪ್ಪೆ ಬಳಿ ಬುಧವಾರ ಈ ಘಟನೆ ನಡೆದಿದೆ. ಅಣ್ಣಪ್ಪನ ಹೆಸರಲ್ಲಿ ವಿಮೆ ಮಾಡಿಸಿದ ಮಗ ಪಾಂಡು, ಆ ಹಣದ ಆಸೆಗೆ ಕೃತ್ಯ ಎಸಗಿದ್ದಾನೆ.
ನಿಮಗೆ ಟಿಬೇಟಿಯನ್ ಮೊದಲನೇ ಕ್ಯಾಂಪಿನಲ್ಲಿ ಕೆಲಸ ಇದೆ ಎಂದು ತಂದೆಯನ್ನು ಕಳುಹಿಸಿದ್ದ ಆರೋಪಿ ಮಗ ಬಳಿಕ ಹಿಂಬದಿಯಿಂದ ಹೋಗಿ ತಲೆಗೆ ದೊಣ್ಣೆಯಿಂದ ಹೊಡೆದು ಕೊಂಡಿದ್ದಾನೆ. ಬಳಿಕ ತಂದೆಯ ಮೃತದೇಹವನ್ನು ಬಿ.ಎಂ. ರಸ್ತೆಯ ಮಂಚ ದೇವನಹಳ್ಳಿ ಸಮೀಪ ಎಸೆದಿದ್ದಾನೆ.
ನಂತರ ತಂದೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಪಾಂಡುವಿನ ದೂರಿನ ಮೇಲೆ ಅನುಮಾನ ಬಂದು ಸಬ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡ ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ. ಇನ್ಶೂರೆನ್ಸ್ ಹಣ ಡಬ್ಬಲ್ ಸಿಗುತ್ತದೆ ಎನ್ನುವ ಆಸೆಯಿಂದ ತನ್ನ ತಂದೆಯನ್ನೇ ಆರೋಪಿ ಹತ್ಯೆ ನಡೆಸಿದ್ದಾನೆ.
ಈ ಘಟನೆಯ ಬೆನ್ನಲ್ಲೇ ತನ್ನ ಸಹೋದರನ ಸಾವನ್ನು ಸಹಿಸಲಾರದೇ ಅಣ್ಣಪ್ಪನವರ ಅಣ್ಣ ಧರ್ಮ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx


