ಹುಬ್ಬಳ್ಳಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ನಾನು ವಿಷಕನ್ಯೆ ಅಂದಿದ್ದೇನೆ. ನಾನು ಕ್ಷಮೆ ಕೇಳಲ್ಲ. ದೊರೆಸ್ವಾಮಿ ನಾಟಕ ಕಂಪನಿಗೆ ಕಾಂಗ್ರೆಸ್ ಏಜೆಂಟ್ ಅಂದಿದ್ದೆ. ನಾನು ರಾಜೀನಾಮೆ ಕೊಡುತ್ತೇನೆ. ಕ್ಷಮೆ ಕೇಳಲ್ಲ. ಪ್ರಧಾನಿ ಮೋದಿ ಬಗ್ಗೆ 91 ಸಾರಿ ಬೈದಿದ್ದಾರೆ. ಹೀಗಾಗಿ ವಿಷ ಸರ್ಪ ಅಂದಾಗ ನಾನು ವಿಷಕನ್ಯೆ ಅಂದಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿಯಾಗುವ ವಿಚಾರವಾಗಿ ಮಾತನಾಡಿದ ಅವರು ಪಕ್ಷ ಯಾರನ್ನಾದರು ಮುಖ್ಯಮಂತ್ರಿ ಮಾಡಲಿ, ಬಸವರಾಜ ಬೊಮ್ಮಾಯಿ ಅವರನ್ನಾದರೂ ಮಾಡಲಿ ಅಥವಾ ನನ್ನನ್ನಾದರೂ ಮಾಡಲಿ ಎನ್ನುವ ಮೂಲಕ ಮುಖ್ಯಮಂತ್ರಿಯಾಗುವ ಇಂಗಿತವನ್ನು ವ್ಯಕ್ತಪಿಡಿಸದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಲ್ಲರಕ್ಕಿಂತ ನಾನು ಗಟ್ಟಿಯಾಗಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರದು ನಮ್ಮ ತರಹ ಸ್ಟ್ರಾಂಗ್ ಹಿಂದೂತ್ವ ಅಲ್ಲ. ಅವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಆಗುವ ಕನಸು ಕಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣನೆ ಮಾಡಿದೆ ಎನ್ನುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ಹತ್ತೀರನೇ ಅಧಿಕಾರ ಇದೆ ಅಲ್ಲ. ಕೆಲವೊಮ್ಮೆ ಅಧಿಕಾರ ಹೋಗತ್ತೆ ಬಿಡಿ. ನಾನು ಸ್ವಲ್ಪ ಸ್ಟೇಟ ಫಾರ್ವರ್ಡ್, ಕುಟುಂಬ ರಾಜಕಾರಣಕ್ಕೆ ವಿರೋಧಿ. ಇವಾಗ ನನಗೂ ಅಧಿಕಾರ ಇಲ್ಲ. ನನ್ನ ಮುಖ್ಯಮಂತ್ರಿ ಅಭ್ಯರ್ಥಿ ಅಂತೀರಿ. ನಾನು ಲಿಂಗಾಯತರಿಗೆ ಅನ್ಯಾಯ ಮಾಡಿಲ್ಲ. ನಾನು ಗೆಲ್ಲುತ್ತೇನೆ ಲೀಡ್ ನೋಡಲ್ಲ ಎಂದರು.
ಜಗದೀಶ್ ಶೆಟ್ಟರ್ ಯಾವತ್ತೂ ಹಿಂದುತ್ವದ ಪರ ಮಾತಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಗಲಾಟೆಯಾದಗ 4 ಜನರನ್ನು ಎನಕೌಂಟರ್ ಮಾಡಬೇಕಿತ್ತು. ಹಳೇ ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದಾಗ ಶೆಟ್ಟರ್ ಕಡೆ ಅಧಿಕಾರ ಇತ್ತು. ಪೊಲೀಸ್ ಠಾಣೆಗ ಹೋದವರನ್ನು ನಾಲ್ಕು ಜನರನ್ನ ಎನಕೌಂಟರ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


