ತುರುವೇಕೆರೆ: ತಾಲೂಕು ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೀಯ ಚುನಾವಣೆಯಲ್ಲಿ ನೂರ್ ಆಯಿಷಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ 15 ದಿನಗಳಿಂದ ಹಿಂದಿನ ಉಪಾಧ್ಯಕ್ಷೆಯಾದ ‘ ಗೀತಾ ಹೆಚ್ಎಸ್ ‘ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು.
ಈ ಗ್ರಾಮ ಪಂಚಾಯಿತಿಯು 16 ಜನ ಸದಸ್ಯ ಬಲ ಹೊಂದಿರುವ ಪಂಚಾಯತಿ ಆಗಿದ್ದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ, ನೂರ್ ಆಯಿಷಾ ಒಬ್ಬರೇ ಸಲ್ಲಿಸಿದ್ದು. ಕೊನೆಯ ಘಳಿಗೆಯವರೆಗೂ ಯಾರೊಬ್ಬರೂ ಇವರ ವಿರುದ್ಧ ನಾಮಪತ್ರ ಸಲ್ಲಿಸಲಿಲ್ಲ. ಆದ ಕಾರಣ ಅಂತಿಮವಾಗಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತುರುವೇಕೆರೆ ತಾಲೂಕು ದಂಡಾಧಿಕಾರಿಗಳಾದ ವೈ ಎಂ ರೇಣು ಕುಮಾರ್ ರವರು ನೂರ್ ಆಯುಷಾ ರವರನ್ನು ಅವಿರೋಧ ಆಯ್ಕೆ ಉಪಾಧ್ಯಕ್ಷೆ ಎಂದು ಘೋಷಿಸಿದರು.
ಆಯ್ಕೆಯಾದ ತಕ್ಷಣ ನೂತನ ಉಪಾಧ್ಯಕ್ಷೆಯ ಬೆಂಬಲಿಗರು ಹಾಗೂ ಅಭಿಮಾನಿಗಳು ಪಂಚಾಯಿತಿಯ ಹೊರಭಾಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು. ಪುಷ್ಪಮಾಲೆಯನ್ನು ಹಾಕಿ ಅಭಿನಂದನೆಯನ್ನು ಸಲ್ಲಿಸಿದರು. ಈ ಚುನಾವಣೆಯಲ್ಲಿ ಸಿಬ್ಬಂದಿಗಳಾಗಿ ಕಾಂತರಾಜುಚುನಾವಣಾ ಶಾಖೆ, ಮಾಯಸಂದ್ರ ಹೋಬಳಿ ಕಂದಾಯ ತನಿಖಾಧಿಕಾರಿಗಳಾದ ಪರಮೇಶ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಾಲಾಜಿ ಸದಸ್ಯರುಗಳಾದ ಗೀತಾ ಹೆಚ್ ಎಸ್,ಜಿ ಗೋವಿಂದಯ್ಯ, ಮಹಾಲಕ್ಷ್ಮಮ್ಮ, ಮಹಾಲಿಂಗಪ್ಪ, ಎಚ್ ಡಿ ಸಿದ್ಗಂಗಮ್ಮ,ಮಹೇಶ್, ಸುಶೀಲಾ,ಸಂದೇಶ, ಎಚ್ ಎಂ ಜಯಲಕ್ಷ್ಮಮ್ಮ,ಎಸ್ ವಿ ಸುರೇಶ,ಎಸ್ ಸಿ ಇಂದಿರಾ,ಆರ್ ಮಂಜುನಾಥ್,ಎನ್ ವಿ ಶಶಿಕಲಾ,ಜಾಬಿರ್ ಹುಸೇನ್, ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು
ಈ ಚುನಾವಣಾ ಸಂದರ್ಭದಲ್ಲಿ ಕೃಷ್ಣಸ್ವಾಮಿ, ಪ್ರೇಮಣ್ಣ ಕುಮಾರ್ ಎಂ.ಜಿ., ಮುತಾವಲಿ ಮಹಮ್ಮದ್ ಇಸ್ಮಾಯಿಲ್, ನಜೀರ್ ಅಹಮದ್, ರಾಮಚಂದ್ರ ಪಟೇಲ್, ಗಂಗಾಧರಯ್ಯ, ಮೋಹಿದೀನ್, ಅಲಿಸಾಬ್, ಆಯುಬ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1