ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಕೊಡಿ ನಾಗಸಂದ್ರ ಟಿ.ಬಿ.ಕ್ರಾಸ್ ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕಲಿಕಾ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು.
ನೂರಾರು ವಿದ್ಯಾರ್ಥಿಗಳು ವಿವಿಧ ವೇಷ ಭೂಷಣಗಳನ್ನು ತೊಟ್ಟು ಶಾಲೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಪಥಸಂಚಲನದೊಂದಿಗೆ ಸಂಚರಿಸಿ ಪುನಃ ಶಾಲಾ ಆವರಣಕ್ಕೆ ಆಗಮಿಸಿ ಶಾಲಾ ಆವರಣದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು..
ಇನ್ನು ಈ ಕಾರ್ಯಕ್ರಮವನ್ನು ಸೊರವನಹಳ್ಳಿ ಕ್ಲಸ್ಟರ್ ಸಿ.ಆರ್.ಪಿ .ಕಂಬಯ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು ಇವರ ಜೊತೆಗೆ ಸುರೇಶ್ ಹಾಗೂ ವಿದ್ಯಾರ್ಥಿಗಳು ಜೊತೆಗೂಡಿದರು
ಈ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಹನ್ನೊಂದು ಶಾಲೆಗಳು ಅದರಲ್ಲಿ ಎಂಟು ಕಿರಿಯ ಪ್ರಾಥಮಿಕ ಶಾಲೆ ಎರಡು ಹಿರಿಯ ಪ್ರಾಥಮಿಕ ಶಾಲೆ ಒಂದು ಉರ್ದು ಮಾಧ್ಯಮ ಶಾಲೆ ಭಾಗವಹಿಸಿದ್ದರು ನೂರಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿ ಆರ್ ಪಿ ಕಂಬಯ್ಯ, ಕಲಿಕಾ ಹಬ್ಬವನ್ನು ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಆಯೋಜನೆ ಮಾಡಲಾಗುವುದು, ಈ ಕಾರ್ಯಕ್ರಮವನ್ನು ಈಗ ಆರಂಭಿಸಲಾಗಿದೆ, ಕಲಿಕಾ ಹಬ್ಬದ ಚಟುವಟಿಕೆಗಳಾದ ಹಾಡ– ಹಾಡು, ಕಾಗದ- ಕತ್ತರಿ, ಮಾಡು ಊರುತಿಳಿಯೋಣ, ಎಂಬ ಗುಂಪುಗಳಾಗಿ ವಿನ್ಯಾಸಗೊಳಿಸಲಾಗಿದೆ. ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ವಿದ್ಯಾರ್ಥಿಗಳು ತಮ್ಮ ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಇರುತ್ತದೆ. ಇದೆಲ್ಲದರ ಜೊತೆಗೆ ಮಗು ಕಲಿಕೆಯ ಸಂದರ್ಭದಲ್ಲಿ ಸೃಷ್ಟಿಸುವ ಮತ್ತು ನಿಭಾಯಿಸುವ ಪ್ರಕ್ರಿಯೆಗಳಲ್ಲಿ ದೊರೆತ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗುತ್ತದೆ ಮಕ್ಕಳು ತನ್ನ ಅನುಭವದ ಮೂಲಕ ತನ್ನದೇ ಜ್ಞಾನ ಸೃಷ್ಟಿಸಿ ತರಗತಿಯ ಮಕ್ಕಳು ಕಲಿಯುವುದನ್ನು ಕಣ್ತುಂಬಿಕೊಳ್ಳೋಣ ಎಂದರು
ಈ ಕಾರ್ಯಕ್ರಮದಲ್ಲಿ ಸಿ ಆರ್ ಪಿ ಬೋರೇಗೌಡ, ಶಾಲೆಯ ಮುಖ್ಯ ಶಿಕ್ಷಕಿ ಯಶೋಧಮ್ಮ ಶಿಕ್ಷಕಿ ಮಂಜುಳಾ, ಹೊಣಕೆರೆ ಗ್ರಾಮದ ಎಸ್ ಡಿ ಎಂ ಸಿ ಅಧ್ಯಕ್ಷ ರಂಗಸ್ವಾಮಿ, ಶಿಕ್ಷಕರುಗಳಾದ ಜೋಗಪ್ಪ, ಸತೀಶ್ ಶಶಿಕುಮಾರ್, ವಿಜಯ್ ಕುಮಾರ್, ಅಡುಗೆ ಸಹಾಯಕಿ ಮಾಲಮ್ಮ ಇನ್ನೂ ಅನೇಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ, ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1