ಬೀದರ್ : ಔರಾದ್ ತಾಲೂಕಿನ ನಾಗೂರ್ (ಬಿ) ಗ್ರಾಮದಲ್ಲಿ ರೈತರೊಬ್ಬರು ತಮ್ಮ ಹೊಲದಲ್ಲಿ ಸೋಯಾ ಬೆಳೆ ಕಟಾವು ಮಾಡಿ ರಾಶಿ ಮಾಡುವುದಕ್ಕಾಗಿ ಬಣವೆ ಹಾಕಿ ಕೂಡಿಟ್ಟಿದ್ದರು. ಆ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸಂಪೂರ್ಣವಾಗಿ ಸೋಯಾಬಿನ್ ಸುಟ್ಟು ಹೋಗಿದೆ.
ನಾಗೂರ್ (ಬಿ) ಗ್ರಾಮದ ನಿವಾಸಿಯಾದ ಶಿವಕುಮಾರ್ ಎನ್ನುವ ರೈತರಿಗೆ ಈ ಸೋಯಾ ಬೆಳೆ ಸೇರಿದೆ. ಸುಮಾರು 3.25 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾ ಸಂಗ್ರಹಿಸಿಡಲು ರಾಶಿ ಹಾಕಿದ್ದರು. ಈ ಬಣವೆಗೆ ರವಿವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ಸುಮಾರು 1 ಲಕ್ಷ ದಿಂದ 1.50 ಲಕ್ಷ ರೂ. ಮೌಲ್ಯದ ಸುಮಾರು 30 ಕ್ವಿಂಟಲ್ ಗಳಿಗೂ ಹೆಚ್ಚಿನ ಸೋಯಾಬೀನ್ ಬೆಳೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಅ.23 ರಂದು ಔರಾದ್ ತಾಲೂಕಿನ ಜೋಜನಾ ಗ್ರಾಮದ ರೈತ ಹನುಮಂತ್ ಅವರಿಗೆ ಸೇರಿದ ಸೋಯಾ ಬಣವೆಗೂ ಕೂಡ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಅದಾದ ಕೆಲ ದಿನಗಳ ನಂತರ ರವಿವಾರ ನಾಗೂರ್ (ಬಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಸೋಯಾ ಬಣವೆ ಹೊಂದಿರುವ ರೈತರು ಭಯಪಡುವಂತಾಗಿದೆ.
ಘಟನಾ ಸ್ಥಳಕ್ಕೆ ಠಾಣಾ ಕುಶನೂರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ವಿಚಾರಣೆ ಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



