ರಾಜ ಮನೆತನದವರಿಗೆ ಆಭರಣ ವ್ಯಾಪಾರಿಯಾಗಿದ್ದ 150 ವರ್ಷ ಇತಿಹಾಸವುಳ್ಳ ಸಿ. ಕೃಷ್ಣಯ್ಯ ಶೆಟ್ಟಿ ಗ್ರೂಪ್ ಆಫ್ ಜುವೆಲರ್ಸ್ ನಿಂದ ಬೆಳಗಾವಿ ನಗರದಲ್ಲಿ ಆಭರಣಗಳ ಮಾರಾಟ ಹಾಗೂ ಆಭರಣಗಳ ಪ್ರದರ್ಶನ ನವೆಂಬರ್ 24 ರಿಂದ 26ರವರೆಗೆ ನಗರದ ಯುಕೆ 27 ಹೋಟೆಲ್ ನಲ್ಲಿ ಪ್ರದರ್ಶನ ಇಡಲಾಗಿದೆ.
ಪ್ರದರ್ಶನ ಹಾಗೂ ಮಾರಾಟ ಮಳೆಗೆಯನ್ನು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ರಾಜು(ಆಸಿಫ್ ) ಸೇಟ್ ಉದ್ಘಾಟಿಸಿದರು. ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ರಾಜಮನೆತನ ಕಾಲದಿಂದ ಕೃಷ್ಣಯ್ಯ ಶೆಟ್ಟಿ ಗ್ರೂಪ್ ಆಭರಣಗಳನ್ನು ತಯಾರು ಮಾಡುತ್ತಾ, ಮಾರಾಟ ಮಾಡುತ್ತಾ ಬಂದಿದೆ.
ಇವರಿಗೆ 150 ವರ್ಷ ಕಾಲ ಐತಿಹಾಸಿಕ ವ್ಯಾಪಾರಿಗಳಾಗಿದ್ದಾರೆ ರಾಜ ಮನೆತನದ ಆಭರಣಗಳನ್ನು ನೋಡಲು ಹಾಗೂ ಖರೀದಿ ಮಾಡಲು ಇದೊಂದು ಸುವರ್ಣ ಅವಕಾಶವಿದೆ.
ಬೆಳಗಾವಿ ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಬೆಳಗಾವಿ ಜನತೆಗೆ ಕರೆ ನೀಡಿದರು. ಸಿ. ಕೃಷ್ಣಯ್ಯ ಗ್ರೂಪ್ ಬೆಳಗಾವಿ ಗ್ರಾಹಕರಿಗೆ ವಿಶೇಷವಾದ ವಿಶೇಷ ರಿಯಾಯಿತಿ ನೀಡಲಿದೆ. ಬೆಳ್ಳಿ ಆಭರಣಗಳ ಮೇಲೆ 2% ಪರ್ಸೆಂಟ್ ಚಿನ್ನದ ಮೇಲೆ 4% ರಿಯಾಯಿತಿ ಡೈಮಂಡ್ ಮೇಲೆ 6% ಮತ್ತು 18.69 ಲಕ್ಷ ಮೌಲ್ಯದ ಡೈಮಂಡ್ ಮೇಲೆ 9% ರಿಯಾತಿ ನೀಡಲಾಗಿದೆ. ಗ್ರೂಪಿನ ವ್ಯವಸ್ಥಾಪಕರು ಸುದ್ದಿಗಾರರಿಗೆ ಮಾಹಿತಿ ನೀಡಿದರು.


