ಕೊರಟಗೆರೆ: ಶ್ರಾವಣ ಮಾಸದ ಮೊದಲನೇ ಶನಿವಾರದಂದು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಹಿಂದೂ ಸಂಪ್ರದಾಯದ ಆಚಾರವಾಗಿದ್ದು, ಶ್ರಾವಣ ಬಂತೆಂದರೆ ಸಾಕು, ದೇವಾಲಯಗಳಲ್ಲಿ ವಿಶೇಷ ಪೂಜೆ ಹೋಮ ಅವನ ವಿಶೇಷ ಕಾರ್ಯಗಳನ್ನು ಭಕ್ತಾದಿಗಳು ನೆರವೇರಿಸುತ್ತಾರೆ.
ಅದರಂತೆಯೇ ಪಟ್ಟಣದ ತೇರಿನ ಬೀದಿಯ ಶ್ರೀ ಶನೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲನೇ ಶನಿವಾರದ ಇಂದು ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು.
ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧೀರ್ ಮಾತನಾಡಿ, ನಮ್ಮ ಕೊರಟಗೆರೆ ಪಟ್ಟಣದಲ್ಲಿ ದಕ್ಷಿಣ ಕಾಶಿ ಎಂದೇ ಇತಿಹಾಸ ಪ್ರಸಿದ್ಧವಾಗಿರುವ ದೇವಾಲಯಗಳಲ್ಲಿ ಒಂದಾದ ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲನೇ ಶನಿವಾರದಂದು ನಮ್ಮ ಪೂರ್ವಿಕರ ಕಾಲದಿಂದಲೂ ವಿಶೇಷ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಶ್ರೀ ಶನೇಶ್ವರ ಸ್ವಾಮಿಯು ಎಲ್ಲ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯ ನಿರ್ದೇಶಕರಾದ ಪುರುಷೋತ್ತಮ ಮಾತನಾಡಿ, 150 ವರ್ಷಗಳ ಇತಿಹಾಸವಿರುವ ಶ್ರೀಶನೇಶ್ವರ ಸ್ವಾಮಿ ದೇವಾಲಯದಲ್ಲಿ, ಬೇಡಿ ಬಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತದೆ. ಈ ದೇವಾಲಯವು ಹಲವು ಚಮತ್ಕಾರಗಳನ್ನು ಒಳಗೊಂಡಿದ್ದು ಭಕ್ತರ ನೆಚ್ಚಿನ ತಾಣವಾಗಿದೆ ಎಂದರು.
ಶನೇಶ್ವರ ಸ್ವಾಮಿಯ ಭಕ್ತಾರಾದ ಸುಷ್ಮಾ ಮಾತನಾಡಿ, ಅನೇಕ ವರ್ಷಗಳಿಂದ ನಾನು ಈ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ, ಶ್ರೀ ಸ್ವಾಮಿಯು ಎಲ್ಲರಿಗೂ ಅನುಗ್ರಹಿಸುತ್ತಾನೆ ಎಂದರು.
ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ


