ನರಕ ಚತುರ್ದಶಿ ಹಿನ್ನೆಲೆ ರಾಯಚೂರಿನ ಮಂತ್ರಾಲಯ ಮಠದಲ್ಲಿ ವಿಶೇಷ ಪೂಜೆ ನೆರವೇರಿದೆ. ಮಠದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಪೂಜಾ ಕೈಂಕರ್ಯ, ಕಾರ್ತಿಕ ಮಹಾಮಂಗಳಾರತಿ ಮೂಲಕ ವಿಶೇಷ ಆಚರಣೆಗಳಿಗೆ ಚಾಲನೆ ನೀಡಿದರು. ರಾಯರ ಮೂಲ ಬೃಂದಾವನಕ್ಕೆ ಪೂಜೆ, ಬಳಿಕ ಗೋ ಪೂಜೆ ನೆರವೇರಿತು.
ಬಳಿಕ ನಾರಿಕೃತ ನೀರಾಜನ, ತೈಲಾಭ್ಯಂಜನ ಕಾರ್ಯಕ್ರಮ ನೆರವೇರಿತು. ಇದೇ ವೇಳೆ ಮಠದಲ್ಲಿ ಸೇರಿದ ನೂರಾರು ಭಕ್ತರಿಗೆ ಶ್ರೀಗಳಿಂದ ಪ್ರವಚನ ಕಾರ್ಯಕ್ರಮ ಜರುಗಿತು.


