ತುಮಕೂರು: ಐತಿಹಾಸಿಕ ಪ್ರಯಾಗ್ರಾಜ್ ನ ಕುಂಭ ಮೇಳದಲ್ಲಿ ಭಗವಹಿಸಿದ್ದ ನಾಗಸಾಧು ಧನಂಜಯ ಗುರೂಜಿ ಇಂದು ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದ ಸಮೀಪ ಇರುವ ಹೆಗ್ಗೆರೆ ಗ್ರಾಮದಲ್ಲಿರುವ ಶಿವಲಿಂಗ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ನಾಗಸಾಧು ಆಗಮಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಗ್ರಾಮಸ್ಥರೆಲ್ಲರೂ ಅವರಿಗೆ ಭವ್ಯವಾದ ಪೂರ್ಣ ಕುಂಭ ಸ್ವಾಗತವನ್ನು ನೀಡಿದರು.
ಹುಳಿಯಾರು ಸಮೀಪದ ಹೆಗ್ಗೆರೆಯ ಚೋಳರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾರುದ್ರ ಶಿವಾಲಯದ ಬಗ್ಗೆ ಕುಂಭಮೇಳದಲ್ಲಿ ಅವರು ಪ್ರಸ್ತಾಪ ಮಾಡಿದ್ದರು.
ನಾಗ ಸಾಧು ಧನಂಜಯ್ ಗುರುಜಿ ಆಗಮಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಸೇರಿದಂತೆ ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಕಂಚೀಪುರ, ಯಳನಾಡು, ದಸೂಡಿ, ಹುಳಿಯಾರು, ಶ್ರೀರಾಂಪುರ ಮುಂತಾದ ಭಾಗದಿಂದ ಭಕ್ತ ಸಮೂಹ ಆಗಮಿಸಿ ನಾಗಸಾಧುವಿನ ದರ್ಶನ ಪಡೆದರು. ನಂತರ ಧನಂಜಯ್ ಗುರೂಜಿ ಅವರು ಶಿವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4