nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇ–ಸ್ವತ್ತು ದಾಖಲೆ ವಿಳಂಬ: ಮಹಾನಗರ ಪಾಲಿಕೆಗೆ ಡಿಸಿ ಶುಭ ಕಲ್ಯಾಣ್ ದಿಢೀರ್ ಭೇಟಿ

    November 21, 2025

    ತಿಪಟೂರು | ‘ಶೌರ್ಯ ಪ್ರಶಸ್ತಿ’ ಪುರಸ್ಕೃತ ಪ್ರಣವ್ ಬೆಳ್ಳೂರು ಅವರಿಗೆ ಸನ್ಮಾನ

    November 21, 2025

    ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಬೆಲೆ ನಿಗದಿ

    November 20, 2025
    Facebook Twitter Instagram
    ಟ್ರೆಂಡಿಂಗ್
    • ಇ–ಸ್ವತ್ತು ದಾಖಲೆ ವಿಳಂಬ: ಮಹಾನಗರ ಪಾಲಿಕೆಗೆ ಡಿಸಿ ಶುಭ ಕಲ್ಯಾಣ್ ದಿಢೀರ್ ಭೇಟಿ
    • ತಿಪಟೂರು | ‘ಶೌರ್ಯ ಪ್ರಶಸ್ತಿ’ ಪುರಸ್ಕೃತ ಪ್ರಣವ್ ಬೆಳ್ಳೂರು ಅವರಿಗೆ ಸನ್ಮಾನ
    • ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಬೆಲೆ ನಿಗದಿ
    • ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿ: ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ
    • ತಿಪಟೂರು: ನ.21ರವರೆಗೆ ಕಲ್ಪೋತ್ಸವ ಕಾರ್ಯಕ್ರಮ
    • ಬಂಜಾರ ಸಂಸ್ಕೃತಿ ಉಳಿವಿಗೆ ತುಮಕೂರಿನಲ್ಲಿ ಅದ್ಧೂರಿ ಜಿಲ್ಲಾ ಮಟ್ಟದ ಕಲಾ ಮೇಳ
    • ಕಣ್ಣಿನ ಆರೋಗ್ಯಕ್ಕೆ ಸಮತೋಲನ ಆಹಾರ ಸೇವಿಸಬೇಕು: ಸಂಪತ್ ಕುಮಾರ್
    • ಮಕ್ಕಳು ಮದ್ಯಪಾನ, ಧೂಮಪಾನ ಚಟುವಟಿಕೆಗಳಿಂದ ದೂರವಿರಬೇಕು: ಶಿಕ್ಷಕ ಮದನ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಿ. ಶ್ರೀಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ: ಚಂದ್ರಪ್ರಭು
    ತುರುವೇಕೆರೆ March 25, 2023

    ದಿ. ಶ್ರೀಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ: ಚಂದ್ರಪ್ರಭು

    By adminMarch 25, 2023No Comments2 Mins Read
    turuvekere

     

    ತುರುವೇಕೆರೆ: ದಿವಂಗತ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆಯಿಂದ ಅಪಾರ ನಷ್ಟ ಉಂಟಾಗಿದೆ ಎಂದು ಜೈನ ಸಮಾಜದ ಮುಖಂಡರಾದ ಚಂದ್ರಪ್ರಭು ಹೇಳಿದರು.


    Provided by
    Provided by

    ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ 1008 ಶಖೆ ದಿಗಂಬರ ಜೈನ ಪಾಶ್ವನಾಥ ಸ್ವಾಮಿ ಟ್ರಸ್ಟ್ (ರಿ) ಗೌರವಾಧ್ಯಕ್ಷರಾಗಿದ್ದ ಮತ್ತು ಜೈನ ಸಮಾಜದ ಶ್ರೀಗಳಾದ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜೈನ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಯಿತು.

    ಈ ವೇಳೆ ಸಮಾಜದ ಅಧ್ಯಕ್ಷರಾದ ಚಂದ್ರಪ್ರಭು ಮಾತನಾಡಿ ಶ್ರೀಗಳು 12-12-1969ರಲ್ಲಿ ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದರು,
    ವಿಚಾರ ಸಂಕಿರಣ, ಧರ್ಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸರಳಶೈಲಿ ಪ್ರವಚನಗಳಿಂದ ಶ್ರಾವಕರ ಮನ ಗೆದ್ದಿದ್ದಾರೆ. ಶ್ರೀಗಳು ಜೈನ ಧರ್ಮ ಇಂದಿಗೂ ತನ್ನತನ ಉಳಿಸಿಕೊಂಡು ಬರುವುದಕ್ಕೆ ಪ್ರಮುಖ ಕಾರಣವೆಂದರೆ ಜೈನ ತತ್ವಶಾಸ್ತ್ರ ಗ್ರಂಥಗಳು ಹಾಗೂ ಜೈನ ವಾಸ್ತುಶಿಲ್ಪ ಕಲೆ ಎಂಬುದನ್ನು ಅರಿತು ಬಸದಿಗಳ ಜೀರ್ಣೋದ್ದಾರ, ಜೈನ ಸಾಹಿತ್ಯ ಪ್ರಕಟಣೆಗೆ ವಿಶೇಷವಾಗಿ ಒತ್ತು ನೀಡಿರುವುದರ ಜೊತೆಗೆ ಅವುಗಳ ಸಂರಕ್ಷಣೆಗಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

    ಮಹಿಳಾ ಸಮಾಜದ ಅಧ್ಯಕ್ಷರಾದ ಸುಮತಿ ಪ್ರಕಾಶ್ ಮಾತನಾಡಿ, ನಾಲ್ಕು ಮಹಾಮಸ್ತಕಾಭಿಷೇಕಗಳು ಶ್ರೀಗಳ ನೇತೃತ್ವದಲ್ಲಿ ನೆರವೇರಿವೆ.ಶ್ರೀ ಬಾಹುಬಲಿ ಮಕ್ಕಳ ಆಸ್ಪತ್ರೆ, ವೃದ್ದಾಶ್ರಮಗಳಂಥ ಸಮಾಜಮುಖಿ ಹಾಗೂ ಇನ್ನೂ ಹತ್ತು ಹಲವು ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ನಿರ್ವಹಿಸುತ್ತಾ ಈ ನಾಡಿನಲ್ಲಿ ಶಾಂತಿ ನೆಲೆಸಲು ಸತತ 50 ವರ್ಷಗಳ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಾ ಬಂದಿದ್ದಾರೆ. ಇದನ್ನು ಅರಿತ ಕನಾ೯ಟಕ ಸರ್ಕಾರವು 2018ರ ರಾಷ್ಟ್ರೀಯ ಶ್ರೀ ಭ.ಮಹಾವೀರ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ.

    ಅವರನ್ನು ಎಲ್ಲ ಜಾತಿ, ಮತ, ಪಂಥಗಳ ಭಕ್ತರೂ ಅತಿಯಾಗಿ ಗೌರವಿಸುವ, ಆದರಿಸುವ, ಪ್ರೀತಿಸುವ, ಅದೆಲ್ಲವೂಗಳಿಗಿಂತ ಅವರನ್ನು ಕಂಡರೆ ಹೆಚ್ಚು ಭಕ್ತಿ, ಅತಿ ಕಡಿಮೆ ಭಯ, ಇನ್ನೂ ಜಾಸ್ತಿ ಪ್ರೀತಿ, ಹೆಚ್ಚಿನ ಅಭಿಮಾನ ಇಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ ಹಾಗೂ ತಾವಾಯಿತು ತಮ್ಮ ಕೆಲಸವಾಯಿತು. ಪೂಜೆ, ಧಾರ್ಮಿಕ ಕಾರ್ಯಗಳು ಜೊತೆಗೆ ಮಾತುಕತೆ, ಅಧ್ಯಯನ, ಧಾರ್ಮಿಕ ಆಚರಣೆಗಳಲ್ಲಿ ಸ್ವಾಮೀಜಿ ಸದಾ ನಿರತರಾಗಿದ್ದರು ಅವರ ನಿಧನಕ್ಕೆ ಸರ್ವರೂ ಕಂಬನಿ ಮಿಡಿದಿದ್ದಾರೆ, ಅವರ ಅಂತ್ಯಸಂಸ್ಕಾರದ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಹಲವಾರು ಮಠದ ಶ್ರೀಗಳು ಭಾಗವಹಿಸಿ ಸಹಕರಿಸಿದ್ದಾರೆ, ಸರ್ವರಿಗೂ ಸಮಾಜದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

    ಈ ಸಂದರ್ಭದಲ್ಲಿ ಮಾಯಸಂದ್ರ ಜೈನ ಸಮಾಜದ ಹಲವಾರು ಪದಾಧಿಕಾರಿಗಳು, ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸುಮತಿ ಪ್ರಕಾಶ್ ಹಾಗೂ ಸರಸ್ವತಿ ಮಹಿಳಾ ಸಮಾಜದ ಎಲ್ಲ ಪದಾಧಿಕಾರಿಗಳು, ಪುರೋಹಿತರಾದ ಪ್ರದೀಪ್ ಸೇರಿದಂತೆ ಮುಖಂಡ ವಿಪುಲ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು, ಸಮಸ್ತ ಜೈನ ಸಮಾಜದ ಮುಖಂಡರು ಸಮಾಜದವರು ಪಾಲ್ಗೊಂಡಿದ್ದರು.

    ವರದಿ: ಸುರೇಶ್ ಬಾಬು ಎಂ. ತುರುವೇಕೆರೆ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

     

    admin
    • Website

    Related Posts

    ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿ: ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ

    November 20, 2025

    ಸರ್ಕಾರಿ ಶಾಲೆಗಳು ಬೇಡವಾಗಿದೆ, ಕಾರಣ ಅರಿಯಬೇಕಿದೆ: ಶಾಸಕ ಎಂ.ಟಿ.ಕೃಷ್ಣಪ್ಪ

    November 18, 2025

    ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರಾಗಲು ನೋಂದಣಿ ಮಾಡಿಸಿ: ಡಿ.ಪಿ.ವೇಣುಗೋಪಾಲ್

    October 26, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಇ–ಸ್ವತ್ತು ದಾಖಲೆ ವಿಳಂಬ: ಮಹಾನಗರ ಪಾಲಿಕೆಗೆ ಡಿಸಿ ಶುಭ ಕಲ್ಯಾಣ್ ದಿಢೀರ್ ಭೇಟಿ

    November 21, 2025

    ತುಮಕೂರು: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಇ–ಸ್ವತ್ತು ದಾಖಲೆಗಳನ್ನು ನೀಡುವಲ್ಲಿ ವಿಳಂಬ ಹಾಗೂ ಪಾಲಿಕೆ ಆಡಳಿತದ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಜಿಲ್ಲಾಧಿಕಾರಿ ಶುಭ…

    ತಿಪಟೂರು | ‘ಶೌರ್ಯ ಪ್ರಶಸ್ತಿ’ ಪುರಸ್ಕೃತ ಪ್ರಣವ್ ಬೆಳ್ಳೂರು ಅವರಿಗೆ ಸನ್ಮಾನ

    November 21, 2025

    ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಬೆಲೆ ನಿಗದಿ

    November 20, 2025

    ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ಮಂಜೂರು ಮಾಡಿ: ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ

    November 20, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.