ಪಾವಗಡ: ಪಟ್ಟಣದ ಇರುವಂತಹ ಸುಪ್ರಸಿದ್ಧ ಶ್ರೀ ಶನಿ ಮಹಾತ್ಮ ಸ್ವಾಮಿಯ ದೇವಸ್ಥಾನದಲ್ಲಿ ಶ್ರೀ ಜೇಷ್ಠದೇವಿ ಮತ್ತು ಶ್ರೀ ಶನೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಶ್ರೀ ಶನಿ ಮಹಾತ್ಮ ಕಾರ್ಯನಿರ್ವಾಹಕ ಸಂಘದ ವತಿಯಿಂದ ಅತ್ಯಂತ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಉತ್ಸವದ ಪ್ರಯುಕ್ತ ದೇವಸ್ಥಾನವನ್ನು ಬಗೆ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಇದಲ್ಲದೆ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಹೋಮ ಹವನಗಳನ್ನು ಸಹ ಯೋಜನೆ ಮಾಡಲಾಗಿತ್ತು.
ಭಾನುವಾರ ಮಧ್ಯಾಹ್ನ 12 ಗಂಟೆಯ ಗಂಟೆಯ ಶುಭ ಮೇಷ ಲಗ್ನದಲ್ಲಿ ಸ್ವಾಮಿ ಇವರ ಬ್ರಹ್ಮರಥೋತ್ಸವ ನೆರವೇರಿದೆ. ಬ್ರಹ್ಮ ರಥೋತ್ಸವದಲ್ಲಿ ನೆರೆಯ ಆಂಧ್ರ ತೆಲಂಗಾಣ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಸ್ವಾಮಿಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy