ತುಮಕೂರು: ಶ್ರೀಅಭಯ ಆಂಜನೇಯಸ್ವಾಮಿ ದೇವಸ್ಥಾನ, ಅಭಯಪುರಿ ಪುಣ್ಯ ಕ್ಷೇತ್ರ, ಮೆಳೇಕೋಟೆ, ತುಮಕೂರು ಇವರ ವತಿಯಿಂದ ಡಿ.6 ಮತ್ತು 7ರಂದು ಶ್ರೀಅಯ್ಯಪ್ಪಸ್ವಾಮಿಯ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ.
ಡಿ.6 ರಂದು ಬೆಳಗ್ಗೆ 6ಗಂಟೆಗೆ ಗೋಪೂಜೆ, 7ಕ್ಕೆ ಶ್ರೀ ಅಭಯ ಆಂಜನೇಯಸ್ವಾಮಿಗೆ ಸುಪ್ರಭಾತ ಸೇವೆ, ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಮಹಾನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅಲಂಕಾರ, ಯೋಗ, ಸಂಜೆ 4 ಗಂಟೆಗೆ ಮಹಾಗಣಪತಿ ಪೂಜೆ, ಅನುಜ್ಞೆ, ಗಂಗಾಪೂಜೆ, ಪುಣ್ಯಾಹ, ರಕ್ಷಾ ಬಂಧನ, ಅಂಕುರಾರ್ಪಣ, ಕಳರಾರಾಧನೆ, ಆದಿವಾಸ ಸಂಜೆ 6 ಗಂಟೆಗೆ ಯಕ್ಷದೀವಿಗೆ ತುಮಕೂರು ಇವರಿಂದ ಡಾ.ಆರತಿ ಪಟ್ರಮೆಯವರ ನಿರ್ದೇಶನದಲ್ಲಿ ಶಬರಿಮಲೈ ಸ್ವಾಮಿ ಅಯ್ಯಪ್ಪರವರ ಯಕ್ಷಗಾನ ಪ್ರಸ್ತುತ ಪಡಿಸಲಾಗುವುದು.
ನಂತರ ಮಹಾ ನೈವೇದ್ಯ, ಮಹಾ ಮಂಗಳಾರತಿ ನಡೆಯಲಿದೆ. ಡಿ.7 ರಂದು ಬೆಳಗ್ಗೆ 5.30ಕ್ಕೆ ಅಯ್ಯಪ್ಪಸ್ವಾಮಿಗೆ ಸುಪ್ರಭಾತ ಸೇವೆ, ಕಳಪಾರಾಧನೆ, ಮೂಲಮಂತ್ರ ಹೋಮ, 8 ರಿಂದ 9ರವರೆಗೆ ಸ್ವಾಮಿಗೆ ಪ್ರಾಣ ಪ್ರತಿಷ್ಠಾಪನೆ, ನೇತ್ರೋಲನ ಹಾಗೂ ಶ್ರೀ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಹಾ ಪೂರ್ಣಾಹುತಿ, ಪ್ರಧಾನ ಕುಂಭಾಭಿಷೇಕ, ಅಲಂಕಾರ, ಪ್ರಾಕಾರೋತ್ಸವ, ಭಜನೆ ಹಾಗೂ ಮಧ್ಯಾಹ್ನ 1:30ಕ್ಕೆ ಮಹಾನೈವೇದ್ಯ, ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗವಿದೆ.
ಸಂಜೆ 6:30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ಪಡಿಪೂಜೆ, ಶ್ರೀ ಅಯ್ಯಪ್ಪಸ್ವಾಮಿ ಭಜನೆ, ಮಹಾ ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ರಾತ್ರಿ 10ಕ್ಕೆ ಹರಿವರಾಸನಂ ಕಾರ್ಯಕ್ರಮ ಮೂಡಿಬರಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಕ್ತರಿಗೆ ನಿರಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


